You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಚಿಕನ್ ಪಾಕ್ಸ್ (ಸಿಡುಬು) ರೋಗದ ಲಸಿಕೆಯು ರೋಗದ ವಿರುದ್ಧ ಬಹಳ ಪರಿಣಾಮಕಾರಿ ಮತ್ತು ಅಡ್ಡ ಪರಿಣಾಮಗಳಿಲ್ಲದ ಲಸಿಕೆಯಾಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಸಿಡುಬು ರೋಗವು ಶಿಶುಗಳಲ್ಲಿ, ಹದಿಹರೆಯದವರಲ್ಲಿ, ವಯಸ್ಕರಲ್ಲಿ, ಗರ್ಭಿಣಿ ಮಹಿಳೆಯರಲ್ಲಿ ಮತ್ತು ಕಡಿಮೆ ರೋಗನಿರೋಧಕ ಶಕ್ತಿಯಿರುವವರಲ್ಲಿ ಹೆಚ್ಚು ತೀವ್ರವಾಗಿರುತ್ತದೆ.
  • ಸಿಡುಬು ರೋಗವು ನ್ಯುಮೋನಿಯಾ ಮತ್ತು ಎನ್ಸೆಫಲೈಟಿಸ್ ರೀತಿಯ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಇನ್ನು ತಡ ಮಾಡಬೇಡಿ!

Talk to your doctor about the Chickenpox Vaccination.

ಸಿಡುಬು ಅಥವಾ ಚಿಕನ್ ಪಾಕ್ಸ್ ಲಸಿಕೆಯೊಂದಿಗಿರುವ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಸಾಮಾನ್ಯವಾಗಿ ಕಂಡು ಬರುವಂತಹ ಅಡ್ಡ ಪರಿಣಾಮಗಳು ಬಹಳ ಅಲ್ಪ ಪ್ರಮಾಣದಲ್ಲಿರುತ್ತದೆ ಮತ್ತು ತನ್ನಷ್ಟಿಗೆ ಕಡಿಮೆಯಾಗುತ್ತದೆ.
ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ:
ಲಸಿಕೆ ಹಾಕಿದ ಭುಜಗಳಲ್ಲಿ ನೋವು
ಜ್ವರ
ಚುಚ್ಚು ಮದ್ದು ನೀಡಿದ ಜಾಗದಲ್ಲಿ ಸಣ್ಣ ಗುಳ್ಳೆಗಳು
ತಾತ್ಕಾಲಿಕ ನೋವು ಮತ್ತು ಕೀಲುಗಳು ಬಿರುಸಾಗುವುದು
ಲಸಿಕೆ ಹಾಕಿದ ನಂತರ ತೀವ್ರ ಅಲರ್ಜಿಕ್ ಪರಿಣಾಮಗಳು ಬಹಳ ಅಪರೂಪ ಆದರೂ ಮಾರಣಾಂತಿಕವಾಗಿರಬಹುದು.
ತೀವ್ರ ಅಲರ್ಜಿಕ್ ಪರಿಣಾಮಗಳ ಲಕ್ಷಣಗಳೆಂದರೆ ಆಯಾಸ, ತಲೆ ಸುತ್ತು, ಜೋರಾದ ಹೃದಯ ಬಡಿತ, ಉಸಿರಾಟದ ಸಮಸ್ಯೆ, ಮುಖ ಮತ್ತು ಗಂಟಲು ಊತ ಮತ್ತು ಚರ್ಮದ ದದ್ದುಗಳು.
ಒಂದುವೇಳೆ ಅಡ್ಡ ಪರಿಣಾಮಗಳೇನಾದರೂ ಕಂಡುಬಂದಲ್ಲಿ, ತಕ್ಷಣವೇ ನಿಮ್ಮ ವೈದ್ಯರನ್ನು ಅಥವಾ ಹತ್ತಿರದ ಆಸ್ಪತ್ರೆಯನ್ನು ಭೇಟಿ ಮಾಡಿ.
ತೀವ್ರ ಗಂಭೀರ ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿಯಾಗಿ.

ಒಂದು ಮಗು ಯಾವಾಗ ಸಿಡುಬು ಲಸಿಕೆಯನ್ನು(ವ್ಯಾಕ್ಸಿನೇಷನ್) ಪಡೆಯಬಹುದು?

ಮಕ್ಕಳು ಎರಡು ಡೋಸ್ ಗಳು ಪಡೆಯುತ್ತಾರೆ:
ಮೊದಲನೆಯ ಡೋಸ್ 15ನೆಯ ತಿಂಗಳುಗಳಲ್ಲಿ
2ನೆಯ ಡೋಸ್ 18 ರಿಂದ 21 ತಿಂಗಳವರೆಗೆ
ಒಂದುವೇಳೆ ಒಂದು ಅಥವಾ ಎರಡೂ ಡೋಸ್ ಹಾಕಿಸುವುದನ್ನು ತಪ್ಪಿಸಿದರೆ, ನೀವು ಕ್ಯಾಚ್-ಅಪ್ ಲಸಿಕೆ(ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಬಹುದು.
ಆದಾಗಿಯೂ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ವೈದ್ಯರನ್ನು ಭೇಟಿಯಾಗಿ.
ಸಿಡುಬು ಅಥವಾ ಚಿಕನ್ ಪಾಕ್ಸ್ ಲಸಿಕೆಯೊಂದಿಗಿರುವ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?
ಸಾಮಾನ್ಯವಾಗಿ ಕಂಡು ಬರುವಂತಹ ಅಡ್ಡ ಪರಿಣಾಮಗಳು ಬಹಳ ಅಲ್ಪ ಪ್ರಮಾಣದಲ್ಲಿರುತ್ತದೆ ಮತ್ತು ತನ್ನಷ್ಟಿಗೆ ಕಡಿಮೆಯಾಗುತ್ತದೆ.

ಚಿಕನ್ ಪಾಕ್ಸ್(ಸಿಡುಬು) ರೋಗದ ಲಕ್ಷಣಗಳು ಮತ್ತು ಅದರಿಂದ ಉಂಟಾಗಬಹುದಾದ ಗಂಭೀರ ಸಮಸ್ಯೆಗಳು ಯಾವುವು?

ಲಕ್ಷಣಗಳೆಂದರೆ:
ಸಣ್ಣದಾಗಿ ಶುರುವಾಗುವ ಜ್ವರ ತೀವ್ರ ಸ್ವರೂಪ ಪಡೆದುಕೊಳ್ಳಬಹುದು
ಹಸಿವು ಕಡಿಮೆಯಾಗುವುದು
ಸಣ್ಣ ಗುಳ್ಳೆಗಳು ತುರಿಕೆಯ ನೀರು ತುಂಬಿದ ಗುಳ್ಳೆಗಳಾಗುವುದು
ನೀರಿನ ಗುಳ್ಳೆಗಳು ಚಿಪ್ಪುಗಟ್ಟುವುದು
ಸಿಡುಬು ರೋಗದ ಬಹಳ ಅಪರೂಪವಾದರೂ ಉಂಟಾಗಬಹುದಾದ ಗಂಭೀರ ಸಮಸ್ಯೆಗಳೆಂದರೆ ಬ್ಯಾಕ್ಟೀರಿಯಲ್ ಸೋಂಕುಗಳು, ಕಲೆಗಳು, ನ್ಯುಮೋನಿಯಾ, ನರಮಂಡಲ ಸೋಂಕುಗಳು, ರಕ್ತಸ್ರಾವ ಸಮಸ್ಯೆಗಳು
ಸಿಡುಬು ರೋಗದಿಂದ ಉಂಟಾಗುವ ಸಮಸ್ಯೆಗಳಿಂದಾಗಿ ಕೆಲವರಲ್ಲಿ ಗಂಭೀರ ಅನಾರೋಗ್ಯ ಮತ್ತು ಆಸ್ಪತ್ರೆಗೆ ಸೇರುವ ಸಮಸ್ಯೆಯೂ ಆಗಬಹುದು. ಬಹಳ ಅಪರೂಪವಾಗಿ ರೋಗಿಯು ಸಿಡುಬು ರೋಗದಿಂದ ಮರಣ ಹೊಂದಬಹುದು.

ಚಿಕನ್ ಪಾಕ್ಸ್(ಸಿಡುಬು) ರೋಗ ಹೇಗೆ ಹರಡುತ್ತದೆ?

ಚಿಕನ್ ಪಾಕ್ಸ್ (ಸಿಡುಬು) ವೈರಾಣು ಸುಲಭವಾಗಿ ಲಸಿಕೆ ತೆಗೆದುಕೊಂಡಿಲ್ಲದವರಿಗೆ ಮತ್ತು ಇದುವರೆಗೆ ಬಂದಿರದ ಜನರಲ್ಲಿ ಬಹಳ ಸುಲಭವಾಗಿ ಈ ರೀತಿಯಾಗಿ ಹರಡಬಲ್ಲದು - ತೆರೆದ ಗುಳ್ಳೆಗಳ ನೇರ ಸಂಪರ್ಕದಿಂದ
-ಸೋಂಕಿನ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಅಥವಾ ಮಾತಾಡಿದಾಗ
ಗರ್ಭಿಣಿ ಮಹಿಳೆಯ ಪ್ಲಾಸೆಂಟಾ(ಹೊಕ್ಕಳು ಬಳ್ಳಿ) ಮೂಲಕ ಜನಿಸದ ಮಗುವಿಗೆ

ಸಿಡುಬು ಎಂದರೇನು?

ಚಿಕನ್ ಪಾಕ್ಸ್ ಅಥವಾ ಸಿಡುಬು, ಅಮ್ಮ ಎಂದು ಸಾಮಾನ್ಯ ಭಾಷೆಯಲ್ಲಿ ಕರೆಯಲಾಗುವ ಇದನ್ನು ವಾರಿಸೆಲ್ಲಾ ಎಂದೂ ಸಹ ಕರೆಯಲಾಗುತ್ತದೆ. ಇದು ಶಿಶುಗಳಲ್ಲಿ, ಹದಿಹರೆಯದವರಲ್ಲಿ, ವಯಸ್ಕರಲ್ಲಿ, ಗರ್ಭಿಣಿ ಮಹಿಳೆಯರಲ್ಲಿ ಮತ್ತು ಕಡಿಮೆ ರೋಗನಿರೋಧಕ ಶಕ್ತಿಯಿರುವವರಲ್ಲಿ ಹೆಚ್ಚು ತೀವ್ರವಾಗಿರುತ್ತದೆ.
ಇದು ವಾರಿಸೆಲ್ಲಾ ಝೋಸ್ಟರ್ ವೈರಾಣುವಿನಿಂದ ಉಂಟಾಗುತ್ತಿದ್ದು ಇದರಲ್ಲಿ ತುರಿಕೆಯನ್ನುಂಟುಮಾಡುವ ನೀರಿನ ಗುಳ್ಳೆಗಳನ್ನು ಕಾಣಬಹುದು. ಗುಳ್ಳೆಗಳು ಎದೆಯ ಮೇಲೆ ಕಾಣಿಸಿ, ಬೆನ್ನು, ಮುಖ ಮತ್ತು ಅಂತಿಮವಾಗಿ ದೇಹದಲ್ಲೆಲ್ಲಾ ಹರಡುತ್ತದೆ. ಇತರ ಲಕ್ಷಣಗಳೆಂದರೆ ಜ್ವರ, ಹಸಿವು ಕಡಿಮೆಯಾಗುವುದು, ಆಯಾಸ ಮತ್ತು ತಲೆನೋವು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನನ್ನ ಮೇಲೆ ಮತ್ತು ನನ್ನ ಮಗುವಿನ ಮೇಲೆ ಚಿಕನ್ ಪಾಕ್ಸ್ (ಸಿಡುಬು) ಲಸಿಕೆಯ ಪರಿಣಾಮಗಳೇನು?

ಚಿಕನ್ ಪಾಕ್ಸ್ ರೋಗದಿಂದಾಗಿ ಆಸ್ಪತ್ರೆ ದಾಖಲೆ, ವೈದ್ಯರ ಭೇಟಿಗಳು, ಔಷಧೋಪಚಾರದ ಖರ್ಚುಗಳು ಮತ್ತು ಕುಟುಂಬದಲ್ಲಿ ಒತ್ತಡ ರೀತಿಯ ಗಮನಾರ್ಹ ಸಾಮಾಜಿಕ ಮತ್ತು ಆರ್ಥಿಕ ಹೊರೆಗಳಿಗೆ ಕಾರಣವಾಗಬಹುದು.

ಸಿಡುಬು ರೋಗವಿರುವ ಮಕ್ಕಳ ಅಂದಾಜು 5-6 ದಿನಗಳ ಶಾಲೆಯನ್ನು ತಪ್ಪಿಸಬೇಕಾಗಬಹುದು ಮತ್ತು ಪೋಷಕರು ಅನಾರೋಗ್ಯ ಮಗುವನ್ನು ಆರೈಕೆ ಮಾಡುವುದಕ್ಕಾಗಿ 3-4 ದಿನಗಳಿಗಾಗಿ ಕೆಲಸಕ್ಕೆ ರಜೆ ಹಾಕ ಬೇಕಾಗಬಹುದು.

ನನ್ನ ಮಗುವಿಗೆ ಚಿಕನ್ ಪಾಕ್ಸ್ ಲಸಿಕೆ (ವ್ಯಾಕ್ಸಿನೇಷನ್) ಯನ್ನು ಹಾಕಿಸುವ ಸೂಕ್ತ ವಯಸ್ಸು ಯಾವುದು?

ಚಿಕನ್ ಪಾಕ್ಸ್ ಲಸಿಕೆ(ವ್ಯಾಕ್ಸಿನೇಷನ್) ಅನ್ನು 15 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ನೀಡಬಹುದು. ಒಂದುವೇಳೆ ಮಗು ನಿರ್ದಿಷ್ಟ ಸಮಯಕ್ಕೆ ಯಾವುದೇ ಲಸಿಕೆಯನ್ನು ಹಾಕಿಸಿಲ್ಲವೆಂದಾದರೆ ಕ್ಯಾಚ್-ಅಪ್ ಲಸಿಕೆಯನ್ನು 18 ವರ್ಷದ ವಯಸ್ಸಿನವರೆಗೆ ಹಾಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ವೈದ್ಯರನ್ನು ಭೇಟಿಯಾಗಿ.

ಚಿಕನ್ ಪಾಕ್ಸ್ (ಸಿಡುಬು) ರೋಗದ ವಿರುದ್ಧ ನಾನು ಹೇಗೆ ನನ್ನ ಮಗುವನ್ನು ರಕ್ಷಿಸಬಹುದು?

ಚಿಕನ್ ಪಾಕ್ಸ್ ಅಥವಾ ಸಿಡುಬು ರೋಗವನ್ನು ತಡೆಗಟ್ಟುವುದಕ್ಕಾಗಿ: ಲಸಿಕೆ ಹಾಕಿಸಬಹುದು ಸೋಂಕಿತ ವ್ಯಕ್ತಿಯಿಂದ ದೂರವಿರಬೇಕು ಸೋಂಕಿನ ಬಟ್ಟೆಗಳನ್ನು ಅಥವಾ ಹಾಸಿಗೆಯ ಬಟ್ಟೆಗಳನ್ನು ನಿಯಮಿತವಾಗಿ ಒಗೆಯಬೇಕು

ಚಿಕನ್ ಪಾಕ್ಸ್ ಲಸಿಕೆ(ವ್ಯಾಕ್ಸಿನೇಷನ್) ಯಾರು ಹಾಕಿಸಬಾರದು?

ಚಿಕನ್ ಪಾಕ್ಸ್ ಲಸಿಕೆಯಿಂದಾಗಿ ಅಥವಾ ಲಸಿಕೆಯ ಯಾವುದೇ ನಿರ್ದಿಷ್ಟ ಅಂಶದಿಂದಾಗಿ ಗಂಭೀರ ಹಾಗೂ ಸಂಭಾವ್ಯ ಮಾರಣಾಂತಿಕ ಅಲರ್ಜಿಕ್ ಪರಿಣಾಮಗಳು ಆಗಿದ್ದಲ್ಲಿ ಅಂತಹವರು ಇದನ್ನು ತೆಗೆದುಕೊಳ್ಳಬಾರದು. ಅನಾರೋಗ್ಯದಿಂದ ಬಳಲುತ್ತಿರುವವರು ಚಿಕನ್ ಪಾಕ್ಸ್ ಲಸಿಕೆಯನ್ನು ತೆಗೆದುಕೊಳ್ಳಬಾರದು. ಒಂದುವೇಳೆ ಸ್ವೀಕೃತಿದಾರರು ಈ ಕೆಳಗಿನವರಾಗಿದ್ದರೆ ದಯವಿಟ್ಟು ಒಮ್ಮೆ ವೈದ್ಯರಿಗೆ ವಿಚಾರಿಸಿ: ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ಎಚ್ಐವಿ/ಏಡ್ಸ್ ಅಥವಾ ಯಾವುದೇ ಇತರ ರೋಗಗಳಿಂದ ಬಳಲುತ್ತಿರುವವರು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ಸ್ಟೀರಾಯ್ಡ್, ಅಥವಾ 2 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿರುವ ವ್ಯಕ್ತಿಗಳು ಯಾವುದೇ ರೀತಿಯ ಕ್ಯಾನ್ಸರ್ ಇದ್ದರೆ ಔಷಧಗಳು ಅಥವಾ ರೇಡಿಯೇಶನ್ ಚಿಕಿತ್ಸೆಯನ್ನು ಪಡೆಯುತ್ತಿರುವ ಕ್ಯಾನ್ಸರ್ ರೋಗಿ ಇತ್ತೀಚಿಗೆ ರಕ್ತ ವರ್ಗಾವಣೆ ಅಥವಾ ಇತರ ಯಾವುದೇ ರಕ್ತದ ಕಣಗಳನ್ನು ತೆಗೆದುಕೊಂಡ ರೋಗಿಗಳು ಗರ್ಭಿಣಿ ಮಹಿಳೆಯರು ಮತ್ತು ಮಗುವಿನ ಯೋಜನೆ ರೂಪಿಸುತ್ತಿರುವವರು *ವಾರಿಸೆಲ್ಲಾ ಲಸಿಕೆಯನ್ನು (ವ್ಯಾಕ್ಸಿನೇಷನ್) ಗರ್ಭಾಧಾರಣೆ ಯೋಜನೆ ಮಾಡುವ 3 ತಿಂಗಳ ಮುಂದೆಯೇ ತೆಗೆದುಕೊಳ್ಳಬೇಕು.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker