You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಹೆಪಾಟೈಟಿಸ್ ಎ ಒಂದು ಲಿವರ್ ಸೋಂಕಾಗಿದ್ದು ಹೆಪಾಟೈಟಿಸ್ ಎ ವೈರಸ್ ನಿಂದ ಉಂಟಾಗುತ್ತದೆ. ಇದು ಬಹಳ ಸಾಂಕ್ರಾಮಿಕ ಕಾಯಿಲೆಯಾಗಿದ್ದು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹರಡುತ್ತದೆ.

ಹೆಪಾಟೈಟಿಸ್ ಎ ಸೋಂಕು ತಡೆಗಟ್ಟಲು ಲಸಿಕೆ ಅತ್ಯಂತ ವಿಶ್ವಾಸಾರ್ಹ ವಿಧಾನವಾಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ಹೆಪಾಟೈಟಿಸ್ ಎ ಲಸಿಕೆಯಿಂದ ಉಂಟಾಗುವ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಸಾಮನ್ಯವಾಗಿ ಹೆಪಾಟೈಟಿಸ್ ಎ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಆದರೆ ಕೆಲವು ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ -

  • ಜ್ವರ
  • ಕೆಂಪಾಗುವುದು
  • ತಲೆ ನೋವು
  • ಹಸಿವು ಕಡಿಮೆಯಾಗುವುದು
  • ಅಸ್ವಸ್ಥತೆ ಎನಿಸುವುದು

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಮಗುವಿಗೆ ಯಾವಾಗ ಹೆಪಾಟೈಟಿಸ್ ಎ ಲಸಿಕೆಯನ್ನು ಹಾಕಿಸಬೇಕು?

ಮಕ್ಕಳಿಗೆ ಹೆಪಾಟೈಟಿಸ್ ಎ ಲಸಿಕೆಯನ್ನು 12 ತಿಂಗಳಿನಿಂದ ಹಾಕಲಾಗುತ್ತದೆ. ವಿವಿಧ ಹೆಪಾಟೈಟಿಸ್ ಎ ಲಸಿಕೆಗಳು ವಿವಿಧ ವೇಳಾಪಟ್ಟಿಗಳನ್ನು ಹೊಂದಿದೆ.

ಹೆಪಾಟೈಟಿಸ್ ಎ ಲಸಿಕೆ(ವ್ಯಾಕ್ಸಿನೇಷನ್) ಕುರಿತಾಗಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ಅದಾಗಿಯೂ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ಹೆಪಾಟೈಟಿಸ್ ಎ ರೋಗ ಲಕ್ಷಣಗಳು ಯಾವುವು?

ಸೋಂಕಿರುವ ಎಲ್ಲರಲ್ಲಿಯೂ ಸಹ ಲಕ್ಷಣಗಳು ಕಾಣಿಸುವುದಿಲ್ಲ. ಒಂದೊಮ್ಮೆ ಕಾಣಿಸಿದರೂ ಸಹ ಸೋಂಕಿನ 2-4 ವಾರಗಳ ನಂತರ ಕಾಣಿಸಿಕೊಳ್ಳುತ್ತದೆ.

ಇಷ್ಟಕ್ಕೆ ಸೀಮಿತವಾಗದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ :

  • ಜ್ವರ
  • ವಾಂತಿ
  • ಬೂದು ಬಣ್ಣದ ಮಲ
  • ಆಯಾಸ
  • ಕಿಬ್ಬೊಟ್ಟೆ ನೋವು
  • ಕೀಲು ನೋವು
  • ಹಸಿವು ಇಲ್ಲದಿರುವುದು
  • ವಾಕರಿಕೆ
  • ಕಾಮಾಲೆ
  • ಗಾಢ ಬಣ್ಣದ ಮೂತ್ರ

ನೆನಪಿಡಿ:
ಮಕ್ಕಳಿಗೆ ಹೋಲಿಸಿದರೆ, ವಯಸ್ಕರಲ್ಲಿ ರೋಗದ ತೀವ್ರತೆಯು ಮತ್ತು ಗಂಭೀರತೆ ಹೆಚ್ಚಿರುತ್ತದೆ.

ಹೆಪಾಟೈಟಿಸ್ ಎ ಹೇಗೆ ಹರಡುತ್ತದೆ?

ಈ ರೋಗವು ಸಾಮಾನ್ಯವಾಗಿ ಮಲ-ಮೌಖಿಕ ಮಾರ್ಗವಾಗಿ ಹರಡುತ್ತದೆ ಅಂದರೆ ಕಲುಷಿತ ಆಹಾರ ಮತ್ತು ನೀರು ಸೇವನೆಯಿಂದ ಇದು ಹರಡುತ್ತದೆ.

ಹೆಪಾಟೈಟಿಸ್ ಎ ಎಂದರೇನು?

ಹೆಪಾಟೈಟಿಸ್ ಎ ಒಂದು ಲಿವರ್ ಸೋಂಕಾಗಿದ್ದು ಹೆಪಾಟೈಟಿಸ್ ಎ ವೈರಸ್ ನಿಂದ ಉಂಟಾಗುತ್ತದೆ. ಇದು ಸೌಮ್ಯ ದಿಂದ ಹಿಡಿದು ತೀವ್ರ ಕಾಯಿಲೆಯ ಸ್ವರೂಪವನ್ನು ಪಡೆದುಕೊಳ್ಳಬಹುದು ಮತ್ತು ಇದು ಕೆಲವು ವಾರಗಳಿಂದ ಹಿಡಿದು ತಿಂಗಳುಗಳವರೆಗೆ ಇರಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೆಪಾಟೈಟಿಸ್ ಎ ವಿರುದ್ಧ ನನ್ನ ಮಗುವನ್ನು ಹೇಗೆ ರಕ್ಷಿಸಬಹುದು?

ನೀವು ನಿಮ್ಮ ಮಗುವಿಗೆ ಹೆಪಾಟೈಟಿಸ್ ಎ ನಿಂದ ರಕ್ಷಿಸಲು ಈ ಕೆಳಗಿನವುಗಳನ್ನು ಅನುಸರಿಸಬಹುದು:
ಶುದ್ಧವಾದ ಕುಡಿಯುವ ನೀರು ಮತ್ತು ಮನೆಯಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ನೈರ್ಮಲ್ಯ ಕಾಪಾಡುವುದು
ಹೆಪಾಟೈಟಿಸ್ ಎ ವಿರುದ್ಧ ಲಸಿಕೆ

ಭಾರತದಲ್ಲಿ ಹೆಪಾಟೈಟಿಸ್ ಎ ಎಷ್ಟು ಸಾಮಾನ್ಯ?

ಹೆಪಾಟೈಟಿಸ್ ಎ ಜಗತ್ತಿನಾದ್ಯಂತ ಕಾಣಬಹುದು ಮತ್ತು ಭಾರತದಲ್ಲಿಯೂ ಸಹ ಒಂದು ಸಾಮಾನ್ಯ ರೋಗವಾಗಿದೆ. ನೈರ್ಮಲ್ಯ ಮತ್ತು ಸ್ಯಾನಿಟೇಷನ್ ನಲ್ಲಿ ಗಮನಾರ್ಹ ಸುಧಾರಣೆಯಿಂದಾಗಿ ಕೆಲವು ಮಕ್ಕಳು ಆರಂಭಿಕ ಹಂತದಲ್ಲಿ ಸೋಂಕಿಗೆ ಒಳಗಾಗುವುದಿಲ್ಲ ಮತ್ತು ಕ್ರಮೇಣವಾಗಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದಿಲ್ಲ. ಆದ್ದರಿಂದ ಅಪಾಯಕ್ಕೆ ಒಳಗಾಗಬಲ್ಲ ಹದಿಹರೆಯದವರು ಮತ್ತು ವಯಸ್ಕರು ಅಧಿಕ ಸಂಖ್ಯೆಯಲ್ಲಿದ್ದಾರೆ ಮತ್ತು ಅವರು ಸೋಂಕಿಗೆ ಒಳಗಾಗುವ ಸಾಧ್ಯತೆ ಸಹ ಇರುತ್ತದೆ. ಈ ವಯೋಮಿತಿಯಲ್ಲಿ ಸೋಂಕು ಬಹಳ ತೀವ್ರ ರೂಪದ್ದಾಗಿರಬಹುದು ಮತ್ತು ಕೆಲಸ ಹಾಗೂ ಶಿಕ್ಷಣದ ಮೇಲೆ ಪರಿಣಾಮ ಬೀರಬಹುದು. ಹೆಪಾಟೈಟಿಸ್ ಎ ತೀವ್ರತೆಯು ವಯಸ್ಸಿನನುಗುಣವಾಗಿ ಹೆಚ್ಚಾಗಬಹುದು ಮತ್ತು ಅಕ್ಯೂಟ್ ಲಿವರ್ ಫೇಲ್ಯೂರ್ ಗೆ ಕಾರಣವಾಗಬಹುದು ಮತ್ತು ಕೆಲವು ಪ್ರಕರಣಗಳಲ್ಲಿ ಸಾವು ಸಂಭವಿಸಬಹುದು.

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ಲಸಿಕೆ ಹಾಕದ ಅಥವಾ ಹಿಂದೆ ಸೋಂಕಿಗೆ ಒಳಗಾಗದ ಎಲ್ಲರೂ ಹೆಪಟೈಟಿಸ್ ಎ ವೈರಸ್ ಸೋಂಕಿಗೆ ಒಳಗಾಗಬಹುದು.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker