You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಹೆಪಾಟೈಟಿಸ್ ಬಿ ಎಂದರೆ ಲಸಿಕೆ(ವ್ಯಾಕ್ಸಿನೇಷನ್)ಯಿಂದ ತಡೆಗಟ್ಟಬಹುದಾದ ಹೆಪಾಟೈಟಿಸ್ ಬಿ ವೈರಸ್ ಇಂದ ಉಂಟಾಗುವ ಸೋಂಕು ಆಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಸೋಂಕಿಗೆ ಒಳಗಾಗುವ ಪ್ರತಿ 3 ರಲ್ಲಿ ಒಂದು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ದೀರ್ಘಾವಧಿಯ ಹೆಪಾಟೈಟಿಸ್ ಬಿ ಬೆಳೆಸಿಕೊಳ್ಳುವ ಅಪಾಯ ಇರುತ್ತದೆ.
  • ಜಾಗತಿಕವಾಗಿ, ಹೆಪಟೈಟಿಸ್ ಬಿ ಸೋಂಕು 2015 ರಲ್ಲಿ ಸಿರೋಸಿಸ್ (ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆ) ಮತ್ತು ಹೆಪಟೊಸೆಲ್ಯುಲರ್ ಕಾರ್ಸಿನೋಮದಿಂದ 8 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ.
ಇನ್ನು ತಡ ಮಾಡಬೇಡಿ!

ಇಂದೇ ನಿಮ್ಮ ವೈದ್ಯರೊಂದಿಗೆ ಹೆಪಟೈಟಿಸ್ ಬಿ ಲಸಿಕೆಯ ಕುರಿತು ಮಾತನಾಡಿ.

ಹೆಪಾಟೈಟಿಸ್ ಬಿ ಲಸಿಕೆಯೊಂದಿಗೆ ಸಂಬಂಧಿಸಿದ ಅಡ್ಡ ಪರಿಣಾಮಗಳು

ಹೆಪಾಟೈಟಿಸ್ ಬಿ ಲಸಿಕೆ(ವ್ಯಾಕ್ಸಿನೇಷನ್) ಹಾಕಿಸಿದ ನಂತರ ಕಂಡುಬರುವ ಕೆಲವು ಸಾಮಾನ್ಯ ಅಡ್ಡ ಪರಿಣಾಮಗಳು ಈ ಕೆಳಗಿನಂತಿವೆ ಆದರೆ ಇವು ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ:

  • ತಲೆನೋವು
  • ಜ್ವರ
  • ಸೂಜಿ ಚುಚ್ಚಿದ ಜಾಗದಲ್ಲಿ ಕೆಂಪಾಗುವುದು ಅಥವಾ ನೋವು ಬರುವುದು

ಅಡ್ಡ ಪರಿಣಾಮಗಳ ಕುರಿತು ಹೆಚ್ಚು ಮಾಹಿತಿಯನ್ನು ಪಡೆಯಲು ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿಮಾಡಿ.

ಮಗುವಿಗೆ ಯಾವಾಗ ಹೆಪಾಟೈಟಿಸ್ ಬಿ ಲಸಿಕೆ ಹಾಕಿಸಬೇಕು?

ಹೆಪಾಟೈಟಿಸ್ ಬಿ ಲಸಿಕೆ ವೇಳಾಪಟ್ಟಿಯು ಅನೇಕ ಆಯ್ಕೆಗಳನ್ನು ನೀಡುತ್ತದೆ ಹಾಗಾಗಿ ನಿರಾಳವಾಗಿ ಹಾಕಿಸಬಹುದು.
ಅದು ಹೇಗೆಂದರೆ :
ಜನನ, 6 ಮತ್ತು 14 ವಾರಗಳಲ್ಲಿ
ಜನನ, 6 ವಾರಗಳು, 6 ತಿಂಗಳುಗಳು
ಜನನ, 6 ವಾರಗಳು, 10 ವಾರಗಳು, 14 ವಾರಗಳು
ಹೆಪಾಟೈಟಿಸ್ ಬಿ ಲಸಿಕೆಗಳು ಒಂದೇ ಆಗಿ ಅಥವಾ ಸಂಯೋಜಿತ ಲಸಿಕೆಯಾಗಿ ಬರುತ್ತದೆ. ಒಂದುವೇಳೆ ಯಾವುದೇ ಡೋಸ್ ತಪ್ಪಿಸಿದಲ್ಲಿ ವೈದ್ಯರು ತಿಳಿಸಿದಂತೆ ಕ್ಯಾಚ್-ಅಪ್ ಲಸಿಕೆ(ವ್ಯಾಕ್ಸಿನೇಷನ್) ಪಡೆದುಕೊಳ್ಳಬಹುದು.
ಅದಾಗಿಯೂ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ಹೆಪಾಟೈಟಿಸ್ ಬಿ ಲಕ್ಷಣಗಳು ಮತ್ತು ಅದರಿಂದಾಗುವ ಗಂಭೀರ ಸಮಸ್ಯೆಗಳು

ಸೋಂಕು ಉಂಟಾದ ಆರಂಭದ ಕೆಲವು ದಿನಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ತೀವ್ರ ವಿಧದ ಕಾಯಿಲೆಯಲ್ಲಿ ಈ ಕೆಳಗಿನ ಲಕ್ಷಣಗಳನ್ನು ಕಾಣಬಹುದು:
ಕಾಮಾಲೆ (ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುವುದು)
ವಾಂತಿ
ಕಿಬ್ಬೊಟ್ಟೆ ನೋವು
ವಾಕರಿಕೆ (ಹೊಟ್ಟೆಯಲ್ಲಿ ಅಸಮಾಧಾನ)
ಆಯಾಸ (ಅತಿಯಾದ ಸುಸ್ತು)
ಗಾಢ ಬಣ್ಣದ ಮೂತ್ರ
ಈ ಲಕ್ಷಣಗಳು ಹಲವು ವಾರಗಳವರೆಗೆ ಮುಂದುವರೆಯಬಹುದು. ಕೆಲವು ಪ್ರಕರಣಗಳಲ್ಲಿ, ಅಕ್ಯೂಟ್ ಹೆಪಾಟೈಟಿಸ್ ಸಮಸ್ಯೆಯು ಅಕ್ಯೂಟ್ ಲಿವರ್ ಫೇಲ್ಯೂರ್ ಗೆ ತಿರುಗಬಹುದು, ಇದು ಜೀವಕ್ಕೆ ಮಾರಕವಾಗಿದೆ.

ಹೆಪಾಟೈಟಿಸ್ ಬಿ ಹೇಗೆ ಹರಡುತ್ತದೆ?

ಹೆಪಾಟೈಟಿಸ್ ಬಿ ರೋಗಕ್ಕೆ ಸಿಲುಕುವ ಅಪಾಯ ಹುಟ್ಟಿನಿಂದ ಆರಂಭವಾಗುತ್ತದೆ. ಹೆಪಾಟೈಟಿಸ್ ಬಿ ಸೋಂಕು ಉಂಟಾಗುವ ಕೆಲವು ಕಾರಣಗಳು ಈ ಕೆಳಗಿನಂತಿವೆ :
ಜನನ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ (ಪೆರಿನೇಟಲ್ ಟ್ರಾನ್ಸ್ಮಿಷನ್)
ಸೋಂಕಿತ ವ್ಯಕ್ತಿಯ ರಕ್ತದ ಸಂಪರ್ಕದಿಂದ
ಸೋಂಕಿತ ವ್ಯಕ್ತಿಯೊಂದಿಗೆ ಹಲ್ಲುಜ್ಜುವ ಬ್ರಷ್ ಗಳು ಅಥವಾ ಬ್ಲೇಡ್ಗಳು ರೀತಿಯ ವಸ್ತುಗಳನ್ನು ಹಂಚಿಕೊಂಡಾಗ
ಈಗಾಗಲೇ ಸೋಂಕಿತ ವ್ಯಕ್ತಿಗೆ ಬಳಸಿದ ಸೂಜಿಗಳು, ಸಿರಿಂಜ್ ಗಳು ಮತ್ತು ರೀತಿಯ ಉಪಕರಣಗಳನ್ನು ಮತ್ತೊಮ್ಮೆ ಬೇರೆ ವ್ಯಕ್ತಿಗೆ ಬಳಸಿದಾಗ
ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ
ಸ್ತನಪಾನ, ಆಲಿಂಗನ, ಕೆಮ್ಮಿದಾಗ, ಸೀನಿದಾಗ, ಕೈ ಮಿಲಾಯಿಸಿದಾಗ ಅಥವಾ ಪಾತ್ರೆಗಳು, ಆಹಾರ ಮತ್ತು ನೀರನ್ನು ಹಂಚಿಕೊಳ್ಳುವುದರಿಂದ ಸೋಂಕು ಉಂಟಾಗುವುದಿಲ್ಲ.

ಹೆಪಾಟೈಟಿಸ್ ಬಿ ಎಂದರೇನು?

ಹೆಪಾಟೈಟಿಸ್ ಬಿ ಒಂದು ಸಾಂಕ್ರಾಮಿಕ ವೈರಾಣುವಿನ ಸೋಂಕಾಗಿದ್ದು ಇದು ಹೆಪಾಟೈಟಿಸ್ ಬಿ ವೈರಸ್ ನಿಂದ ಉಂಟಾಗುತ್ತದೆ. ಇದು ಲಿವರ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೀವ್ರ(ಅಲ್ಪಾವಧಿ) ಅಥವಾ ದೀರ್ಘ ಸಮಯದ ಕಾಯಿಲೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಮಕ್ಕಳಲ್ಲಿ ದೀರ್ಘಾವಧಿಯ ಸೋಂಕು ಕಂಡುಬರುವ ಹೆಚ್ಚಿನ ಸಾಧ್ಯತೆಗಳಿವೆ. ಅದೇ ಹೆಪಾಟೈಟಿಸ್ ಬಿ ಇರುವ ಕೇವಲ ೨-೬% ವಯಸ್ಕರು ಮಾತ್ರ ದೀರ್ಘಾವಧಿಯ ಕಾಯಿಲೆ ಅಥವಾ ಸೋಂಕನ್ನು ಹೊಂದಿರುತ್ತಾರೆ, ಮತ್ತು ಶಿಶುಗಳಲ್ಲಿ ಇದು ಶೇಖಡಾ ೯೦% ಹೆಚ್ಚಿರುತ್ತದೆ.

ಸೋಂಕು ತಗಲುವ ಎಲ್ಲರೂ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ ಆದರೆ ಕೆಲವರು ಸಿರೋಸಿಸ್ (ದೀರ್ಘಾವಧಿಯ ಲಿವರ್ ಕಾಯಿಲೆ) ಮತ್ತು ಜೀವಮಾರಕವಾದ ಲಿವರ್ ಕ್ಯಾನ್ಸರ್ ರೀತಿಯ ಸಮಸ್ಯೆಗಳಿಂದ ಬಳಲಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೆಪಾಟೈಟಿಸ್ ಎ ಲಸಿಕೆಯು ಹೆಪಾಟೈಟಿಸ್ ಬಿ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆಯೇ?

ಇಲ್ಲ, ಹೆಪಾಟೈಟಿಸ್ ಎ ಲಸಿಕೆಯು ಹೆಪಾಟೈಟಿಸ್ ಬಿ ಸೋಂಕಿನ ವಿರುದ್ಧ ರಕ್ಷಣೆ ನೀಡುವುದಿಲ್ಲ. ಆದ್ದರಿಂದ ಹೆಪಾಟೈಟಿಸ್ ಬಿ ಲಸಿಕೆಯನ್ನು(ವ್ಯಾಕ್ಸಿನೇಷನ್) ಪ್ರತ್ಯೇಕವಾಗಿ ಹಾಕಿಸಿ.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker