You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ(ಹಿಬ್) ಒಂದು ಬ್ಯಾಕ್ಟೀರಿಯಾ ಪ್ರಮುಖವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ರೀತಿಯ ಪ್ರಾಣಕ್ಕೆ ಮಾರಕವಾದ ಕಾಯಿಲೆಗಳಿಗೆ ಕಾರಣವಾಗಬಹುದು. ಹಿಬ್ ಸೋಂಕನ್ನು ಬಹಳ ಪರಿಣಾಮಕಾರಿಯಾದ ರೀತಿಯಲ್ಲಿ ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ(ಹಿಬ್) ಲಸಿಕೆಯೊಂದಿಗೆ ತಡೆಗಟ್ಟಬಹುದು.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಜಾಗತಿಕವಾಗಿ, 2000 ರಲ್ಲಿ ಹಿಬ್ ನಿಂದ 70-80 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಗಂಭೀರ ರೋಗಗಳಿಗೆ ಸಿಲುಕಿ ಮತ್ತು 3.5 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಸಾವನ್ನಪ್ಪಿದ್ದಾರೆ.
  • ಹಿಬ್ ರೋಗದ ಅಪಾಯವು 4 ರಿಂದ 18 ತಿಂಗಳ ಮಗುವಿನ ನಡುವೆ ಅತಿ ಹೆಚ್ಚು ಇರುತ್ತದೆ.
ಇನ್ನು ತಡ ಮಾಡಬೇಡಿ!

ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ ಲಸಿಕೆ ಕುರಿತು ಹೆಚ್ಚು ತಿಳಿಯಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ಹಿಬ್ ಲಸಿಕೆಯ ಸಾಮಾನ್ಯ ಅಡ್ಡ ಪರಿಣಾಮಗಳು

ಹಿಬ್ ಲಸಿಕೆಯ ಕೆಲವು ಅಡ್ಡ ಪರಿಣಾಮಗಳೆಂದರೆ:

  • ಸೂಜಿ ಚುಚ್ಚಿದ ಸ್ಥಳದಲ್ಲಿ ಕೆಂಪಗಾಗುವುದು, ಬಿಸಿಯಾಗುವುದು ಅಥವಾ ಊತ ಬರುವುದು
  • ಜ್ವರ

ಅಡ್ಡಪರಿಣಾಮಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಮಗುವಿಗೆ ಯಾವಾಗ ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ(ಹಿಬ್) ಲಸಿಕೆಯನ್ನು ಕೊಡಬೇಕು?

ಹಿಬ್ ಗಾಗಿ ಲಸಿಕಾ ವೇಳಾಪಟ್ಟಿಯು ಮಗುವಿನ ವಯಸ್ಸನ್ನು ಅವಲಂಬಿಸಿದೆ

6 ತಿಂಗಳಿಗಿಂತ ಕಡಿಮೆ: 3 ಪ್ರೈಮರಿ (ಕನಿಷ್ಠ ೧ ತಿಂಗಳ ಅಂತರದಲ್ಲಿ) ಮತ್ತು 16-18 ತಿಂಗಳುಗಳಲ್ಲಿ 1 ಬೂಸ್ಟರ್

6-12 ತಿಂಗಳುಗಳು : 2 ಪ್ರೈಮರಿ (ಕನಿಷ್ಠ 1 ತಿಂಗಳ ಅಂತರದಲ್ಲಿ) ಮತ್ತು 16-18 ತಿಂಗಳುಗಳಲ್ಲಿ 1 ಬೂಸ್ಟರ್

12-15 ತಿಂಗಳು: 1 ಡೋಸ್ ನಂತರ 16-18 ತಿಂಗಳುಗಳಲ್ಲಿ 1 ಬೂಸ್ಟರ್

15 ತಿಂಗಳು - 5 ವರ್ಷಗಳು: 1 ಡೋಸ್ ಸಾಕು

ಹಿಬ್ ಲಸಿಕೆಗಳು ಒಂದೇ ಆಗಿ ಅಥವಾ ಸಂಯೋಜಿತ ಲಸಿಕೆಯಾಗಿ ಬರುತ್ತದೆ. ವಿಭಿನ್ನ ಲಸಿಕೆಗಳು ವಿಭಿನ್ನ ವೇಳಾಪಟ್ಟಿಯನ್ನು ಹೊಂದಿರುತ್ತದೆ ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಕ್ಕಳ ತಜ್ಞರನ್ನು ಒಮ್ಮೆ ಭೇಟಿ ಮಾಡಿ.

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಹಿಬ್ ಸೋಂಕಿನ ಲಕ್ಷಣಗಳು ಮತ್ತು ಅದರಿಂದಾಗುವ ಗಂಭೀರ ಸಮಸ್ಯೆಗಳು ಯಾವುವು?

ಸೋಂಕಿನ ತೀವ್ರತೆಯನ್ನು ಆಧರಿಸಿ ಈ ಬ್ಯಾಕ್ಟೀರಿಯಾ ಅನೇಕ ಕಾಯಿಲೆಗಳಿಗೆ ಮತ್ತು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಉದಾಹರಣೆಗೆ:

ನ್ಯುಮೋನಿಯಾ - ಇದೊಂದು ತೀವ್ರ ಶ್ವಾಸಕೋಶದ ಸೋಂಕಾಗಿದ್ದು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತದೆ.

ಕೆಲವು ಲಕ್ಷಣಗಳೆಂದರೆ:

ಜ್ವರ ಮತ್ತು ನಡುಕ
ಕೆಮ್ಮು
ಉಸಿರಾಟದ ಸಮಸ್ಯೆ
ಬೆವರುವುದು
ಎದೆ ನೋವು
ತಲೆ ನೋವು
ಸ್ನಾಯು ನೋವು
ಅತಿಯಾದ ಆಯಾಸ

ಬ್ಯಾಕ್ಟೀರಿಯಲ್ ಮೆನಿಂಜೈಟಿಸ್ : ಇದು ಮೆದುಳು ಹಾಗೂ ಮೆದುಳು ಬಳ್ಳಿಯ ಸುತ್ತಲಿರುವ ಸುರಕ್ಷಾ ಪದರದ ಉರಿಯೂತವಾಗಿದೆ. ಇದೊಂದು ಮಾರಣಾಂತಿಕ ಸ್ಥಿತಿಯಾಗಿದ್ದು ಇದು ಶಾಶ್ವತ ವಿಕಲಾಂಗತೆ ಮತ್ತು ಸಾವಿಗೆ ಕಾರಣವಾಗಬಹುದು.

ಇದರ ಲಕ್ಷಣಗಳೆಂದರೆ:

ಜ್ವರ
ತಲೆನೋವು
ಕುತ್ತಿಗೆ ನೋವು
ವಾಕರಿಕೆ
ಫೋಟೋಫೋಬಿಯಾ (ಬೆಳಕಿಗೆ ಅಸಹಿಷ್ಣುತೆ)
ಗೊಂದಲದ ಮಾನಸಿಕ ಸ್ಥಿತಿ

ರಕ್ತದ ಸೋಂಕು: ಇದರ ಅರ್ಥ ಸೂಕ್ಷ್ಮಜೀವಿಗಳಿಂದ ಉಂಟಾಗುವ ರಕ್ತದ ಕಾಯಿಲೆಗಳು. ಇದರ ಕೆಲವು ಲಕ್ಷಣಗಳೆಂದರೆ:

ಜ್ವರ ಮತ್ತು ನಡುಕ
ಅತಿಯಾದ ಆಯಾಸ
ಹೊಟ್ಟೆಯಲ್ಲಿ ನೋವು
ವಾಂತಿ ಅಥವಾ ವಾಕರಿಕೆ
ಭೇದಿ
ಉದ್ವೇಗ
ಉಸಿರಾಟದ ಸಮಸ್ಯೆ
ಗೊಂದಲಮಯ ಮಾನಸಿಕ ಸ್ಥಿತಿ

ಹಿಬ್ ಹೇಗೆ ಹರಡುತ್ತದೆ?

ಬ್ಯಾಕ್ಟೀರಿಯಾ ವ್ಯಕ್ತಿಯ ಮೂಗು ಮತ್ತು ಗಂಟಲಿನಲ್ಲಿ ಇರುತ್ತದೆ ಮತ್ತು ಒಂದುವೇಳೆ ಅವರು ಯಾವುದೇ ಲಕ್ಷಣಗಳನ್ನು ತೋರದಿದ್ದರೂ ಸಹ ಅವರು ಕ್ಯಾರಿಯರ್ ಆಗಿರುತ್ತಾರೆ. ಬ್ಯಾಕ್ಟೀರಿಯಾ ಸೋಂಕಿತ ವ್ಯಕ್ತಿಯು ಕೆಮ್ಮುವಾಗ ಅಥವಾ ಸೀನುವಾಗ ಹರಡುತ್ತದೆ. ಕ್ಯಾರಿಯರ್ ಜೊತೆಗೆ ದೀರ್ಘಾವಧಿಯ ಸಂಪರ್ಕ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ ಎಂದರೇನು?

ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ ಎಂಬುದು ಬ್ಯಾಕ್ಟೀರಿಯಾ ಆಗಿದ್ದು ಅದು ಸೌಮ್ಯದಿಂದ ಗಂಭೀರವಾದ ವಿವಿಧ ಆಕ್ರಮಣಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಹಿಬ್ ಸೋಂಕಿನಿಂದ ಉಂಟಾಗುವ ಇತರ ಸಾಮಾನ್ಯ ರೋಗಗಳು:
ಕಿವಿ ಸೋಂಕು

ಬ್ರಾಂಕೈಟಿಸ್ (ಕೆಮ್ಮು, ಉಸಿರುಗಟ್ಟುವಿಕೆ, ಇತ್ಯಾದಿ ಕಾರಣವಾಗುವ ಬ್ರಾಂಕಿಯಲ್ ಟ್ಯೂಬ್ ನ ಪದರದ ಉರಿಯೂತ)

ಬ್ಯಾಕ್ಟೀರಿಯಲ್ ಮೆನಿಂಜೈಟಿಸ್ (ಮೆದುಳು ಬಳ್ಳಿ ಮತ್ತು ಮೆದುಳಿನ ಸುರಕ್ಷಾ ಪದರಗಳ ಉರಿಯೂತ)

ನ್ಯುಮೋನಿಯಾ

ಮೆದುಳು ಹಾನಿ

ರಕ್ತ, ಕೀಲುಗಳು ಅಥವಾ ಮೂಳೆಯ ಸೋಂಕುಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಾನು ಹೇಗೆ ನನ್ನ ಮಗುವನ್ನು ಹಿಬ್ ನಿಂದ ರಕ್ಷಿಸಬಹುದು?

ಹಿಬ್ ಸೋಂಕು ಸಾಮಾನ್ಯವಾಗಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ ರೋಗವನ್ನು ತಡೆಗಟ್ಟಲು ಇರುವ ಒಂದು ಉತ್ತಮ ಮಾರ್ಗವೆಂದರೆ ಅದು ಲಸಿಕೆ(ವ್ಯಾಕ್ಸಿನೇಷನ್). ಜೊತೆಗೆ ಹಿಬ್ ಒಂದು ಸಲಕ್ಕಿಂತ ಹೆಚ್ಚು ಸಮಯ ವ್ಯಕ್ತಿಗೆ ಸೋಂಕು ಉಂಟುಮಾಡಬಹುದು. ಹೀಗೆ, ಒಬ್ಬ ವ್ಯಕ್ತಿಯು ಸೋಂಕಿನಿಂದ ಈಗಾಗಲೇ ಗುಣಮುಖನಾಗಿದ್ದರೂ ಸಹ ಲಸಿಕೆ ಹಾಕಿಸಲು ಶಿಫಾರಸ್ಸು ಮಾಡಲಾಗಿದೆ.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker