You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ದಡಾರ ಅಥವಾ ಮೀಸಲ್ಸ್ ಒಂದು ತೀವ್ರ ವೈರಾಣುವಿನ ಸೋಂಕಾಗಿದ್ದು ಇದನ್ನು ಮೀಸಲ್ಸ್ ಲಸಿಕೆಯಿಂದ(ಎಂಎಂಆರ್ ಲಸಿಕೆ) ತಡೆಗಟ್ಟಬಹುದಾಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಮೀಸಲ್ಸ್ ಅಥವಾ ದಡಾರ ವಿರುದ್ಧ ರಕ್ಷಣೆಯನ್ನು ನೀಡುವ ಲಸಿಕೆಗಳು ಮಂಪ್ಸ್ ಮತ್ತು ರುಬೆಲ್ಲಾ ಸಂಯೋಜನೆಯೊಂದಿಗೆ ಸಿಗುತ್ತದೆ.
  • ಲಸಿಕೆ ಪಡೆಯದ ಸಣ್ಣ ಮಕ್ಕಳು ಮೀಸಲ್ಸ್(ದಡಾರ) ಮತ್ತು ಸಾವು ಒಳಗೊಂಡಂತೆ ಇತರ ಗಂಭೀರ ಸಮಸ್ಯೆಗಳು ಬರುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಇನ್ನು ತಡ ಮಾಡಬೇಡಿ!

ಗರ್ಭಕಂಠದ ಕ್ಯಾನ್ಸರ್ ಲಸಿಕೆಯ(ವ್ಯಾಕ್ಸಿನೇಷನ್) ಕುರಿತು ನಿಮ್ಮ ವೈದ್ಯರೊಂದಿಗೆ ಇಂದೇ ಮಾತನಾಡಿ. 

ಮಂಪ್ಸ್ ಲಸಿಕೆಯಿಂದ(ಎಂಎಂಆರ್ ಲಸಿಕೆ) ಯೊಂದಿಗೆ ಸಂಬಂಧಿಸಿದ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಅನೇಕ ಮಕ್ಕಳು ಲಸಿಕೆಯ ನಂತರ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಒಂದುವೇಳೆ ಅಡ್ಡಪರಿಣಾಮಗಳಿದ್ದರೆ ಅವು ಸೌಮ್ಯ ರೂಪದ್ದಾಗಿರುತ್ತದೆ ಮತ್ತು ಅವುಗಳೆಂದರೆ:

  • ಸೂಜಿ ಚುಚ್ಚಿದ ಸ್ಥಳದಲ್ಲಿ ನೋವು, ಊತ ಮತ್ತು ಕೆಂಪಗಾಗುವುದು
  • ಜ್ವರ
  • ಸಣ್ಣ ದದ್ದುಗಳು
  • ತಾತ್ಕಾಲಿಕ ನೋವು ಮತ್ತು ಕೀಲುಗಳಲ್ಲಿ ಬಿಗಿತ

ಅಪರೂಪವಾಗಿ, ಅಡ್ಡಪರಿಣಾಮಗಳಲ್ಲಿ ತೀವ್ರ ಜ್ವರ ಇರುತ್ತದೆ ಮತ್ತು ಮೂರ್ಛೆರೋಗಕ್ಕೆ ಕಾರಣವಾಗುತ್ತದೆ.

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ನಿಮ್ಮ ವೈದ್ಯರನ್ನು ಭೇಟಿಮಾಡಿ.

ಒಂದು ಮಗು ಯಾವಾಗ ಮೀಸಲ್ಸ್ ಲಸಿಕೆ (ಎಂಎಂಆರ್ ಲಸಿಕೆ) ಹಾಕಿಸಬೇಕು?

ಮಕ್ಕಳು ಮೂರು ಡೋಸ್ ಗಳನ್ನು ಪಡೆಯಬೇಕು:

  • 9 ತಿಂಗಳುಗಳಲ್ಲಿ 1ನೆಯ ಡೋಸ್
  • 15 ತಿಂಗಳುಗಳಲ್ಲಿ 2ನೆಯ ಡೋಸ್
  • 4-6 ವರ್ಷಗಳ ನಡುವೆ 3ನೆಯ ಡೋಸ್

3ನೆಯ ಡೋಸ್ ಅನ್ನು ಎರಡನೆಯ ಡೋಸ್ ಹಾಕಿಸಿದ 8 ವಾರಗಳ ನಂತರ ಯಾವುದೇ ಸಮಯದಲ್ಲಿ ಹಾಕಿಸಬಹುದು.

ಕ್ಯಾಚ್-ಅಪ್ ವ್ಯಾಕ್ಸಿನೇಷನ್(ಲಸಿಕೆ)

ಈ ಹಿಂದೆ ಮಂಪ್ಸ್ ಲಸಿಕೆ(ವ್ಯಾಕ್ಸಿನೇಷನ್) ಪಡೆಯದ ಶಾಲೆಗೆ ಹೋಗುವ ಎಲ್ಲಾ ಮಕ್ಕಳು ಮತ್ತು ಹದಿಹರೆಯದವರು 2 ಡೋಸ್ ಗಳನ್ನೂ ಪಡೆಯಬೇಕು

ಒಂದುವೇಳೆ ಒಮ್ಮೆ ಲಸಿಕೆಯನ್ನು ಪಡೆದುಕೊಂಡಿದ್ದರೆ, ಕೇವಲ ಒಂದು ಡೋಸ್ ನೀಡಿದರೆ ಸಾಕು

2 ಡೋಸ್ ಗಳ ನಡುವಿನ ಅಂತರವು 4 ವಾರಗಳು ಇರಬೇಕು

ಆದಾಗಿಯೂ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ

ಮೀಸಲ್ಸ್(ದಡಾರ) ರೋಗದ ಲಕ್ಷಣಗಳು ಮತ್ತು ಅದರಿಂದಾಗುವ ಗಂಭೀರ ಸಮಸ್ಯೆಗಳು ಏನು?

ಮೀಸಲ್ಸ್ ನ ಮೊದಲ ಲಕ್ಷಣವೆಂದರೆ ಅಧಿಕ ಜ್ವರ ಮತ್ತು ಇತರ ಲಕ್ಷಣಗಳೆಂದರೆ :

ಮುಖ, ಮೇಲ್ಭಾಗದ ಕುತ್ತಿಗೆಯಿಂದ ಕೈಕಾಲುಗಳಿಗೆ ಹರಡುವ ಸಣ್ಣ ಗುಳ್ಳೆಗಳು

ಕೆಮ್ಮು

ಸೋರುವ ಮೂಗು

ಕಣ್ಣು ಕೆಂಪಗಾಗುವುದು ಮತ್ತು ನೀರು ಬರುವುದು

ಕೆನ್ನೆಗಳ ಒಳಗೆ ಸಣ್ಣ ಬಿಳಿಯ ಚುಕ್ಕಿಗಳು

ಸಾಮಾನ್ಯವಾಗಿ 5 ವರ್ಷಗಳಿಗಿಂತ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಥವಾ 30 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಗಂಭೀರ ಸಮಸ್ಯೆಗಳು ಕಾಣಿಸುತ್ತದೆ. ಈ ಗಂಭೀರ ಸಮಸ್ಯೆಗಳೆಂದರೆ:

ಕುರುಡುತನ

ಎನ್ಸೆಫಲೈಟಿಸ್ (ಮೆದುಳು ಊತಕ್ಕೆ ಕಾರಣವಾಗುವ ಸೋಂಕು)

ತೀವ್ರ ಭೇದಿ ಮತ್ತು ಸಂಬಂಧಿತ ನಿತ್ರಾಣ

ಕಿವಿ ಸೋಂಕುಗಳು ಅಥವಾ ನ್ಯುಮೋನಿಯಾ ರೀತಿಯ ತೀವ್ರ ಶ್ವಾಸಕೋಶ ಸೋಂಕುಗಳು

ಮೀಸಲ್ಸ್(ದಡಾರ) ಹೇಗೆ ಹರಡುತ್ತದೆ?

ಮೀಸಲ್ಸ್ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕಿತ ಶ್ವಾಸಕೋಶದ ಹನಿಗಳಿಂದ ಕೆಮ್ಮುವಾಗ ಮತ್ತು ಸೀನುವಾಗ ಅಥವಾ ನೇರ ಸಂಪರ್ಕದಿಂದ ಹರಡುತ್ತದೆ.

ಮೀಸಲ್ಸ್ ಎಂದರೇನು?

ಮೀಸಲ್ಸ್ ಅಥವಾ ದಡಾರ ರೋಗವು ಅತಿ ಸಾಂಕ್ರಾಮಿಕ, ಗಂಭೀರ ವೈರಾಣುವಿನ ರೋಗವಾಗಿದ್ದು ಇದು ಮುಖ್ಯವಾಗಿ ಶ್ವಾಸಕೋಶ ನಾಳಕ್ಕೆ ಸೋಂಕು ತಗಲುತ್ತದೆ ಮತ್ತು ದೇಹಾದ್ಯಂತ ಹರಡುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಎಂಎಂಆರ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಾರದು?
  • ಈ ಹಿಂದೆ ಮೀಸಲ್ಸ್ ಲಸಿಕೆಗೆ ಅಥವಾ ಲಸಿಕೆಯ ಯಾವುದೇ ಒಂದು ಅಂಶಕ್ಕೆ ಸಂಭಾವ್ಯ ಜೀವ ಮಾರಕವಾದ ಅಲರ್ಜಿಕ್ ಅಡ್ಡ ಪರಿಣಾಮವನ್ನು ಅನುಭವಿಸಿದ್ದವರು ಇದನ್ನು ತೆಗೆದುಕೊಳ್ಳಬಾರದು
  • ಮೀಸಲ್ಸ್ ಲಸಿಕೆಯನ್ನು ಹಾಕಿಸುವಾಗ ಅನಾರೋಗ್ಯದಿಂದ ಬಳಲುತ್ತಿದ್ದರೆ \
  • ಒಂದುವೇಳೆ ಲಸಿಕೆ ಪಡೆಯುವವರು ಈ ಕೆಳಗಿನ ಸ್ಥಿತಿಗಳನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಒಮ್ಮೆ ವಿಚಾರಿಸಿ:
  1. ಎಚ್ಐವಿ/ಏಡ್ಸ್ ಅಥವಾ ಅವರ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಯಾವುದೇ ಇತರ ರೋಗವನ್ನು ಹೊಂದಿರುವ ವ್ಯಕ್ತಿಗಳು
  2. ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸ್ಟೀರಾಯ್ಡ್ಗಳು, 2 ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ರೀತಿಯ ಔಷಧಿಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳು
  3. ಯಾವುದೇ ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗಳು
  4. ಔಷಧ ಅಥವಾ ರೇಡಿಯೇಷನ್ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು
  5. ಇತ್ತೀಚಿಗೆ ರಕ್ತ ಅಥವಾ ಇತರ ರಕ್ತ ಕಣಗಳ ವರ್ಗಾವಣೆಯನ್ನು ಮಾಡಿಕೊಂಡ ವ್ಯಕ್ತಿಗಳು

ಮಕ್ಕಳಿಗಾಗಿ ಯೋಜನೆ* ಮಾಡುತ್ತಿರುವ ಗರ್ಭಿಣಿ ಮಹಿಳೆ

*ಎಂಎಂಆರ್ ಲಸಿಕೆಯನ್ನು ಗರ್ಭವಾಸ್ಥೆಯ ಯೋಜನೆ ರೂಪಿಸುವ 3 ತಿಂಗಳ ಮೊದಲು ತೆಗೆದುಕೊಳ್ಳಬೇಕು

ಯಾರು ಅಪಾಯದಲ್ಲಿದ್ದಾರೆ?

ಲಸಿಕೆ ಪಡೆಯದ ಮಕ್ಕಳು ಸಾಮಾನ್ಯವಾಗಿ ಹೆಚ್ಚಿನ ಅಪಾಯದಲ್ಲಿದ್ದಾರೆ. ಆದರೆ ಇದು ಗರ್ಭಿಣಿ ಮಹಿಳೆಯರು* ಮತ್ತು ರೋಗನಿರೋಧಕತೆ ಇಲ್ಲದ ಜನರು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಪರಿಣಾಮ ಬೀರುತ್ತದೆ.

*ಎಂಎಂಆರ್ ಲಸಿಕೆಯನ್ನು ಗರ್ಭವಾಸ್ಥೆಯ ಯೋಜನೆ ರೂಪಿಸುವ 3 ತಿಂಗಳ ಮೊದಲು ತೆಗೆದುಕೊಳ್ಳಬೇಕು.

ನಾನು ಹೇಗೆ ನನ್ನ ಮಗುವನ್ನು ಮೀಸಲ್ಸ್ ನಿಂದ ರಕ್ಷಿಸಬಹುದು?

ಮೀಸಲ್ಸ್ ವಿರುದ್ಧ ಮಕ್ಕಳನ್ನು ರಕ್ಷಿಸಲು ಮೀಸಲ್ಸ್ ಲಸಿಕೆ (ಎಂಎಂಆರ್ ಲಸಿಕೆ) ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker