You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಮೆನಿಂಗೋಕೋಕಲ್ ಮೆನಿಂಜೈಟಿಸ್ ರೋಗವು ನೈಸೆರಿಯಾ ಮೆನಿಂಜಿಟಿಡಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕತೆಯನ್ನು ತರುವಲ್ಲಿ ಸಮರ್ಥವಾಗಿದೆ. ಇದು ಶ್ವಾಸಕೋಶದ ದ್ರವ ಹನಿಗಳಿಂದ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.

ಸಕಾಲಿಕ ಲಸಿಕೆಯಿಂದ ಮೆನಿಂಗೊಕೋಕಲ್ ಮೆನಿಂಜೈಟಿಸ್ ಸಮಸ್ಯೆಯನ್ನು ತಡೆಗಟ್ಟಬಹುದು.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಮೆನಿಂಗೊಕೋಕಲ್ ಮೆನಿಂಜೈಟಿಸ್ ಮುಖ್ಯವಾಗಿ ಶಿಶುಗಳಲ್ಲಿ, ಪೂರ್ವಪ್ರಾಥಮಿಕ ಮಕ್ಕಳಲ್ಲಿ ಮತ್ತು ಸಣ್ಣ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಎಲ್ಲ ವಯಸ್ಸಿನ ಜನರಿಗೆ ಇದರ ಸೋಂಕು ಹರಡಬಹುದು.
  • ಪ್ರತಿ 5 ರಲ್ಲಿ 1 ಬದುಕುಳಿದವರು ದೀರ್ಘ ಕಾಲದ ವಿಕಲಾಂಗತೆ ಅಂದರೆ ಕೈಕಾಲುಗಳು ಸ್ವಾಧೀನ ಕಳೆದುಕೊಳ್ಳುವುದು, ಕಿವುಡು, ನರಮಂಡಲ ಸಮಸ್ಯೆಗಳು ಅಥವಾ ಮೆದುಳಿನ ಹಾನಿಯಿಂದ ಬಳಲಬಹುದು.
ಇನ್ನು ತಡ ಮಾಡಬೇಡಿ!

ಗರ್ಭಕಂಠದ ಕ್ಯಾನ್ಸರ್ ಲಸಿಕೆಯ(ವ್ಯಾಕ್ಸಿನೇಷನ್) ಕುರಿತು ನಿಮ್ಮ ವೈದ್ಯರೊಂದಿಗೆ ಇಂದೇ ಮಾತನಾಡಿ. 

ಮೆನಿಂಗೊಕೋಕಲ್ ಲಸಿಕೆಯೊಂದಿಗೆ ಸಂಬಂಧಿಸಿರುವ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಮೆನಿಂಗೊಕೋಕಲ್ ಲಸಿಕೆಯನ್ನು ಹಾಕಿಸಿದ ನಂತರ ಕಂಡು ಬರುವ ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ:

  • ಸೂಜಿ ಹಾಕಿದ ಜಾಗದಲ್ಲಿ ನೋವು
  • ಸೂಜಿ ಹಾಕಿದ ಜಾಗದಲ್ಲಿ ಊತ ಅಥವಾ ಕೆಂಪಗಾಗುವುದು
  • ಜ್ವರ
  • ತಲೆನೋವು

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಮಗುವಿಗೆ ಯಾವಾಗ ಮೆನಿಂಗೊಕೋಕಲ್ ಮೆನಿಂಜೈಟಿಸ್ ಲಸಿಕೆಯನ್ನು ಕೊಡಬೇಕು?

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್(2020-21) ಪ್ರಕಾರ ಮೆನಿಂಗೊಕೋಕಲ್ ಲಸಿಕೆ(ವ್ಯಾಕ್ಸಿನೇಷನ್) ಅಧಿಕ ಅಪಾಯವಿರುವ ಮಕ್ಕಳ ಗುಂಪಿಗೆ ಶಿಫಾರಸ್ಸು ಮಾಡಲಾಗಿದೆ.

  • 9 ತಿಂಗಳುಗಳಿಂದ 2 ವರ್ಷಗಳ ಮಗುವಿಗಾಗಿ, 2 ಡೋಸ್, 3 ತಿಂಗಳಿಗೊಮ್ಮೆ #
  • 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಒಂದು ಡೋಸ್*
  • *#ದಯವಿಟ್ಟು ಗಮನಿಸಿ, ವಿವಿಧ ಉತ್ಪಾದಕರ ಮೆನಿಂಗೊಕೋಕಲ್ ಲಸಿಕೆಗಳು ಮಕ್ಕಳು ಮತ್ತು ಆಯಾ ವಯಸ್ಸುಗಳಿಗಾಗಿ ವಿಭಿನ್ನ ಅನುಮೋದನೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಕ್ಕಳ ತಜ್ಞರನ್ನು ಒಮ್ಮೆ ಭೇಟಿ ಮಾಡಿ.
ಮೆನಿಂಗೊಕೋಕಲ್ ಮೆನಿಂಜೈಟಿಸ್ ರೋಗ ಲಕ್ಷಣಗಳು ಮತ್ತು ಅದರಿಂದಾಗಬಹುದಾದ ಗಂಭೀರ ಪರಿಣಾಮಗಳು ಯಾವುವು?

ಮೆನಿಂಗೊಕೋಕಲ್ ಮೆನಿಂಜೈಟಿಸ್ ಪ್ರಾಥಮಿಕವಾಗಿ ಮೆದುಳು ಹಾಗೂ ಮೆದುಳು ಬಳ್ಳಿಯ ಪದರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಊತ ಉಂಟಾಗುತ್ತದೆ. ಅದಾಗಿಯೂ ಸೋಂಕಿನ ತೀವ್ರತೆಯನ್ನು ಆಧರಿಸಿ ಲಕ್ಷಣಗಳೂ ಬದಲಾಗುತ್ತವೆ. ಕೆಲವು ಸಾಮಾನ್ಯ ಲಕ್ಷಣಗಳೆಂದರೆ:

  • ಜ್ವರ
  • ತಲೆನೋವು
  • ವಾಕರಿಕೆ
  • ವಾಂತಿ
  • ಕುತ್ತಿಗೆ ನೋವು
  • ಗೊಂದಲದ ಮಾನಸಿಕ ಸ್ಥಿತಿ
  • ಫೋಟೋಫೋಬಿಯಾ (ಬೆಳಕಿಗೆ ತೀಕ್ಷ್ಣತೆ)

ಸೋಂಕಿನ ತೀವ್ರ ರೂಪಗಳಲ್ಲಿ ಮೆನಿಂಗೊಕೋಕಲ್ ಸೆಪ್ಟಿಸಿಮಿಯಾ ಕೂಡ ಒಂದಾಗಿದೆ. ಇದರಲ್ಲಿ ಗಾಢ ನೇರಳೆ ಬಣ್ಣದ ದದ್ದು ಕಾಣಿಸಿಕೊಳ್ಳುತ್ತದೆ ಮತ್ತು ತ್ವರಿತ ಹೃದಯ ವೈಫಲ್ಯ ಉಂಟಾಗಿ ಸಾವು ಸಂಭವಿಸುತ್ತದೆ.

ಗಂಭೀರ ಪರಿಣಾಮಗಳು

ಆರಂಭಿಕ ರೋಗನಿರ್ಣಯವಾದರೂ ಸಹ, ಸುಮಾರು 8%_ 15% ರೋಗಿಗಳು ಸೋಂಕಿನ ಮೊದಲ 24 ರಿಂದ 48 ಗಂಟೆಗಳಲ್ಲಿ ಸಾಯುತ್ತಾರೆ.

ಪ್ರತಿ 5 ರಲ್ಲಿ ಒಬ್ಬ ವ್ಯಕ್ತಿಯು ಕಿವುಡು, ನರಮಂಡಲ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ಮೆದುಳಿನ ಹಾನಿ ರೀತಿಯ ಗಂಭೀರ ಸಮಸ್ಯೆಗಳು ಉಂಟಾಗಬಹುದು.

ಮೆನಿಂಗೊಕೋಕಲ್ ಮೆನಿಂಜೈಟಿಸ್ ಹೇಗೆ ಹರಡುತ್ತದೆ?

ಪ್ರಾಥಮಿಕವಾಗಿ ಬ್ಯಾಕ್ಟೀರಿಯಾ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಒಬ್ಬ ಸೋಂಕಿತ ವ್ಯಕ್ತಿಯೊಂದಿಗಿನ ಹತ್ತಿರದ ಅಥವಾ ದೀರ್ಘಸಮಯದ ಸಂಪರ್ಕದಿಂದ ಶ್ವಾಸಕೋಶ ಅಥವಾ ಗಂಟಲಿನ ದ್ರವಗಳಿಂದ ಸೋಂಕನ್ನು ಹರಡಬಹುದು. ಗಾಳಿಯಾಡದ ಮನೆಗಳು, ಧೂಮಪಾನ, ಚುಂಬನ ನೀಡುವುದು, ಯಾವುದೇ ವ್ಯಕ್ತಿಯ ಹತ್ತಿರದಲ್ಲಿ ಸೀನುವುದು ಅಥವಾ ಕೆಮ್ಮುವುದು ಮಾಡಿದರೆ ಸೋಂಕು ಹರಡುತ್ತದೆ. ಸಾಮೂಹಿಕ ಕೂಟಗಳಲ್ಲಿ ಸೋಂಕಿನ ಹರಡುವಿಕೆಯ ಅಪಾಯ ಹೆಚ್ಚಿರುತ್ತದೆ.

ಮೆನಿಂಗೊಕೋಕಲ್ ಮೆನಿಂಜೈಟಿಸ್ ಎಂದರೇನು?

ಮೆನಿಂಜೈಟಿಸ್ ಬ್ಯಾಕ್ಟೀರಿಯಾ, ಶಿಲಿಂಧ್ರ ಅಥವಾ ವಿವಿಧ ವಿಧಗಳ ವೈರಾಣುಗಳಿಂದ ಉಂಟಾದರೂ ಸಹ ಮೆನಿಂಗೊಕೋಕಲ್ ಮೆನಿಂಜೈಟಿಸ್ ರೋಗವು ನೈಸೆರಿಯಾ ಮೆನಿಂಜಿಟಿಡಿಸ್ ನಿಂದ ಉಂಟಾಗುತ್ತದೆ. ಮೆನಿಂಗೊಕೋಕೈ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾ ಮೆನಿಂಜೈಟಿಸ್ ಹೊರತುಪಡಿಸಿ ಸೆಪ್ಸಿಸ್, ನ್ಯೂಮೋನಿಯಾ, ಆರ್ಥ್ರಿರೈಟಿಸ್(ಸಂಧಿವಾತ), ಮಯೋಕಾರ್ಡಿಟೈಸ್ ಮತ್ತು ಇತರ ವೈದ್ಯಕೀಯ ಸ್ಥಿತಿಗಳಿಗೆ ಕಾರಣವಾಗುತ್ತದೆ. ಇದನ್ನು ಹೀಗೆಯೇ ಬಿಟ್ಟರೆ ಇದರಿಂದ ತೀವ್ರ ಮೆದುಳು ಹಾನಿ ಉಂಟಾಗುತ್ತದೆ ಮತ್ತು ಮಾರಣಾಂತಿಕವಾಗುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಯಾರು ಮೆನಿಂಗೊಕೋಕಲ್ ರೋಗದ ಹೆಚ್ಚಿನ ಅಪಾಯದಲ್ಲಿದ್ದಾರೆ?

ಮೆನಿಂಗೊಕೋಕಲ್ ರೋಗವು ಯಾವುದೇ ವಯಸ್ಸಿನ ವ್ಯಕ್ತಿಯ ಮೇಲೆ ಪರಿಣಾಮ ಬೀರಬಹುದು. ಅದಾಗಿಯೂ, ಇದನ್ನು ಸಾಮಾನ್ಯವಾಗಿ 5 ವರ್ಷಗಳು ಮತ್ತು ಅದಕ್ಕಿಂತ ಕಡಿಮೆ ಇರುವ ಮಕ್ಕಳಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಕರಲ್ಲಿ ಮತ್ತು ಹದಿಹರೆಯದವರಲ್ಲಿ ಹೆಚ್ಚಾಗಿ ಕಾಣಬಹುದು.

ಮೆನಿಂಗೊಕೋಕಲ್ ಮೆನಿಂಜೈಟಿಸ್ ರೋಗವನ್ನು ತಡೆಗಟ್ಟಬಹುದೇ?

ಮೆನಿಂಗೊಕೋಕಲ್ ಮೆನಿಂಜೈಟಿಸ್ ವಿರುದ್ಧ ನಿಮ್ಮ ಮಗುವನ್ನು ರಕ್ಷಿಸಲು ಮೆನಿಂಗೊಕೋಕಲ್ ಮೆನಿಂಜೈಟಿಸ್ ಲಸಿಕೆಯು ಬಹಳ ಪರಿಣಾಮಕಾರಿಯಾದ ವಿಧಾನವಾಗಿದೆ.

ವಿವಿಧ ವಿಧಗಳ ಮೆನಿಂಗೊಕೋಕಲ್ ರೋಗಗಳಿಗಾಗಿ ವಿಭಿನ್ನ ಲಸಿಕೆಗಳು ಇವೆ. ಭಾರತದಲ್ಲಿ ಮೆನಿಂಗೊಕೋಕಲ್ ಎಸಿಡಬ್ಲ್ಯೂವೈ ಲಸಿಕೆಯು ಲಭ್ಯವಿರುತ್ತದೆ. ಇದು ನಾಲ್ಕು ಪ್ರಮುಖ ವಿಧಗಳ ಮೆನಿಂಗೊಕೋಕಲ್ ರೋಗಗಳ ವಿರುದ್ಧ ರಕ್ಷಣೆ ನೀಡಲು ಸಹಾಯ ಮಾಡುತ್ತದೆ.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker