You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಮಂಪ್ಸ್ ಒಂದು ಸಾಂಕ್ರಾಮಿಕ ರೋಗವಾಗಿದೆ ಮತ್ತು ಮಂಪ್ಸ್ ಲಸಿಕೆಯು(ಎಂಎಂಆರ್ ಲಸಿಕೆ) ರೋಗಕ್ಕೆ ಸಿಲುಕುವ ಅಪಾಯವನ್ನು ಕಡಿಮೆ ಮಾಡುವ ಅತ್ಯುತ್ತಮ ವಿಧಾನವಾಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಮಂಪ್ಸ್ ಸೋಂಕು ಇರುವ ರೋಗಿಯು ಲಕ್ಷಣರಹಿತವಾಗಿರಬಹುದು ಅಥವಾ ಕೆಲವೊಮ್ಮೆ ನಿರ್ದಿಷ್ಟವಿರದ ಪ್ರಾಥಮಿಕ ಉಸಿರಾಟ ವ್ಯವಸ್ಥೆಯ ಅಸಮತೋಲದ ಲಕ್ಷಣಗಳನ್ನು ತೋರಿಸಬಹುದು.
  • ಮಂಪ್ಸ್ ವಿರುದ್ಧ ರಕ್ಷಣೆಯನ್ನು ನೀಡುವ ಮಂಪ್ಸ್ ಲಸಿಕೆಯನ್ನು ಮೀಸಲ್ಸ್ ಹಾಗೂ ರುಬೆಲ್ಲಾ ಸಂಯೋಜನೆಯೊಂದಿಗೆ ನೀಡಲಾಗುತ್ತದೆ.
ಇನ್ನು ತಡ ಮಾಡಬೇಡಿ!

ಗರ್ಭಕಂಠದ ಕ್ಯಾನ್ಸರ್ ಲಸಿಕೆಯ(ವ್ಯಾಕ್ಸಿನೇಷನ್) ಕುರಿತು ನಿಮ್ಮ ವೈದ್ಯರೊಂದಿಗೆ ಇಂದೇ ಮಾತನಾಡಿ. 

ಮಂಪ್ಸ್ ಲಸಿಕೆಯಿಂದ(ಎಂಎಂಆರ್ ಲಸಿಕೆ) ಯೊಂದಿಗೆ ಸಂಬಂಧಿಸಿದ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಅನೇಕ ಮಕ್ಕಳು ಲಸಿಕೆಯ ನಂತರ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಒಂದುವೇಳೆ ಅಡ್ಡಪರಿಣಾಮಗಳಿದ್ದರೆ ಅವು ಸೌಮ್ಯ ರೂಪದ್ದಾಗಿರುತ್ತದೆ ಮತ್ತು ಅವುಗಳೆಂದರೆ:

  • ಸೂಜಿ ಚುಚ್ಚಿದ ಸ್ಥಳದಲ್ಲಿ ನೋವು, ಊತ ಮತ್ತು ಕೆಂಪಗಾಗುವುದು
  • ಜ್ವರ
  • ಸಣ್ಣ ದದ್ದುಗಳು
  • ತಾತ್ಕಾಲಿಕ ನೋವು ಮತ್ತು ಕೀಲುಗಳಲ್ಲಿ ಬಿಗಿತ

ಅಪರೂಪವಾಗಿ, ಅಡ್ಡಪರಿಣಾಮಗಳಲ್ಲಿ ತೀವ್ರ ಜ್ವರ ಇರುತ್ತದೆ ಮತ್ತು ಮೂರ್ಛೆರೋಗಕ್ಕೆ ಕಾರಣವಾಗುತ್ತದೆ.

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ನಿಮ್ಮ ವೈದ್ಯರನ್ನು ಭೇಟಿಮಾಡಿ.

ಒಂದು ಮಗು ಯಾವಾಗ ರುಬೆಲ್ಲಾ ಲಸಿಕೆಯನ್ನು ಪಡೆಯಬಹುದು?

ಮಕ್ಕಳು 3 ಡೋಸ್ ಲಸಿಕೆಗಳನ್ನು ಪಡೆಯಬೇಕು:

  • 9 ತಿಂಗಳುಗಳಲ್ಲಿ 1ನೆಯ ಡೋಸ್
  • 15 ತಿಂಗಳುಗಳಲ್ಲಿ 2ನೆಯ ಡೋಸ್
  • 4-6 ವರ್ಷಗಳ ನಡುವೆ 3ನೆಯ ಡೋಸ್

3ನೆಯ ಡೋಸ್ ಅನ್ನು ಎರಡನೆಯ ಡೋಸ್ ಹಾಕಿಸಿದ 8 ವಾರಗಳ ನಂತರ ಯಾವುದೇ ಸಮಯದಲ್ಲಿ ಹಾಕಿಸಬಹುದು.

ಕ್ಯಾಚ್-ಅಪ್ ವ್ಯಾಕ್ಸಿನೇಷನ್(ಲಸಿಕೆ)

ಈ ಹಿಂದೆ ರುಬೆಲ್ಲಾ ಲಸಿಕೆ(ವ್ಯಾಕ್ಸಿನೇಷನ್) ಪಡೆಯದ ಶಾಲೆಗೆ ಹೋಗುವ ಎಲ್ಲಾ ಮಕ್ಕಳು ಮತ್ತು ಹದಿಹರೆಯದವರು 2 ಡೋಸ್ ಗಳನ್ನೂ ಪಡೆಯಬೇಕು

ಒಂದುವೇಳೆ ಒಮ್ಮೆ ಲಸಿಕೆಯನ್ನು ಪಡೆದುಕೊಂಡಿದ್ದರೆ, ಕೇವಲ ಒಂದು ಡೋಸ್ ನೀಡಿದರೆ ಸಾಕು

2 ಡೋಸ್ ಗಳ ನಡುವಿನ ಅಂತರವು 4 ವಾರಗಳು ಇರಬೇಕು

ಆದಾಗಿಯೂ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ

ಮಂಪ್ಸ್ (ಗಳಗಂಟಲು) ರೋಗದ ಲಕ್ಷಣಗಳು ಮತ್ತು ಅದರಿಂದಾಗುವ ಗಂಭೀರ ಸಮಸ್ಯೆಗಳು ಯಾವುವು?

ಹೆಚ್ಚಿನ ಜನರು ಪರೋಟೈಟಿಸ್ ಎಂದೂ ಕರೆಯಲ್ಪಡುವ ಲಾಲಾರಸ ಗ್ರಂಥಿಗಳ (ಪರೋಟಿಡ್ ಗ್ರಂಥಿ) ಊತದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಪರೋಟಿಡ್ ಗ್ರಂಥಿಯು ಕಿವಿಯ ಮುಂಭಾಗದಲ್ಲಿ ಮತ್ತು ಕೆಳಗಿರುತ್ತದೆ ಮತ್ತು ಮಂಪ್ಸ್ ಸಮಯದಲ್ಲಿ ಇದು ಊದಿಕೊಳ್ಳುತ್ತದೆ. ಇದು ಕೆನ್ನೆಗಳನ್ನು ಉಬ್ಬುವಂತೆ ಮಾಡುತ್ತದೆ ಮತ್ತು ದವಡೆಯು ಊದಿಕೊಳ್ಳುತ್ತದೆ ಮತ್ತು ಹೆಚ್ಚು ನೋವಿರುತ್ತದೆ.

ಇತರ ಸಮಸ್ಯೆಗಳೆಂದರೆ:

  • ಜ್ವರ
  • ತಲೆನೋವು
  • ಸ್ನಾಯು ನೋವು
  • ಆಯಾಸ
  • ಹಸಿವು ಕಡಿಮೆಯಾಗುವುದು

ಅಪರೂಪವಾಗಿ ಮಂಪ್ಸ್(ಗಳಗಂಟಲು) ಗಂಭೀರ ಸಮಸ್ಯೆಗಳನ್ನು ಹೊಂದಿದೆ, ಅವುಗಳೆಂದರೆ:

  • ಆರ್ಕಿಟಿಸ್ - ವೃಷಣಗಳ ಉರಿಯೂತ
  • ಊಫೋರೈಟಿಸ್ - ಅಂಡಾಶಯಗಳ ಉರಿಯೂತ
  • ಪ್ಯಾಂಕ್ರಿಯಾಟೈಟಿಸ್ - ಮೇದೋಜೀರಕ ಗ್ರಂಥಿಗಳ ಉರಿಯೂತ
  • ಎನ್ಸೆಫಲೈಟಿಸ್ - ಮೆದುಳಿನ ಉರಿಯೂತ
  • ಮೆನಿಂಜೈಟಿಸ್ - ಮೆದುಳು ಮತ್ತು ಮೆದುಳು ಬಳ್ಳಿಯ ಮೇಲೆ ಮುಚ್ಚಿಕೊಂಡಿರುವ ಅಂಗಾಂಶದ ಉರಿಯೂತ

ವೃಷಣಗಳ ಉರಿಯೂತದಿಂದ ಪುರುಷರಲ್ಲಿ ತಾತ್ಕಾಲಿಕ ನಪುಂಸಕತೆ ಮತ್ತು ಫಲವತ್ತತೆ ಕಡಿಮೆಯಾಗುತ್ತದೆ.

ಮಂಪ್ಸ್ (ಗಳಗಂಟಲು) ಹೇಗೆ ಹರಡುತ್ತದೆ?

ಮಂಪ್ಸ್ ವೈರಾಣು ಸಾಮಾನ್ಯವಾಗಿ ಮನುಷ್ಯರಿಂದ ಮಾತ್ರ ಹರಡುತ್ತದೆ. ಇದು ಸೋಂಕಿತ ವ್ಯಕ್ತಿಯ ಬಾಯಿ, ಮೂಗು ಅಥವಾ ಗಂಟಲಿನ ಎಂಜಲು ಅಥವಾ ಲೋಳೆಯಿಂದ ಹರಡುತ್ತದೆ.

ಮಂಪ್ಸ್ ಈ ಕೆಳಗಿನ ರೀತಿಯಾಗಿ ಹರಡುತ್ತದೆ:

  • ಕೆಮ್ಮುವುದು
  • ಸೀನುವುದು
  • ಸೋಂಕಿತ ವ್ಯಕ್ತಿಯೊಂದಿಗೆ ವಸ್ತುಗಳನ್ನು ಹಂಚಿಕೊಳ್ಳುವುದು
ಮಂಪ್ಸ್ (ಗಳಗಂಟಲು) ಎಂದರೇನು?

ಮಂಪ್ಸ್ ಒಂದು ತೀವ್ರ ವೈರಾಣುವಿನ ರೋಗವಾಗಿದ್ದು ಇದು ಮುಖ್ಯವಾಗಿ ಒಂದು ಅಥವಾ ಎರಡೂ ಪರೋಟಿಡ್ ಲಾಲಾರಸ ಗ್ರಂಥಿಗಳ(ಕೆನ್ನೆ ಹಾಗೂ ದವಡೆ ಭಾಗ) ಮೇಲೆ ಪರಿಣಾಮಬೀರುತ್ತದೆ. ಇದು ರುಬುಲವೈರಸ್ ಕುಟುಂಬದ ಸದಸ್ಯ ಪ್ಯಾರಾಮಿಕ್ಸೊವೈರಸ್ನಿಂದ ಉಂಟಾಗುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಎಂಎಂಆರ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಾರದು?
  • ಈ ಹಿಂದೆ ಮೀಸಲ್ಸ್ ಲಸಿಕೆಗೆ ಅಥವಾ ಲಸಿಕೆಯ ಯಾವುದೇ ಒಂದು ಅಂಶಕ್ಕೆ ಸಂಭಾವ್ಯ ಜೀವ ಮಾರಕವಾದ ಅಲರ್ಜಿಕ್ ಅಡ್ಡ ಪರಿಣಾಮವನ್ನು ಅನುಭವಿಸಿದ್ದವರು ತೆಗೆದುಕೊಳ್ಳಬಾರದು
  • ಮೀಸಲ್ಸ್ ಲಸಿಕೆಯನ್ನು ಹಾಕಿಸುವಾಗ ಅನಾರೋಗ್ಯದಿಂದ ಬಳಲುತ್ತಿದ್ದರೆ
  • ಒಂದುವೇಳೆ ಲಸಿಕೆ ಪಡೆಯುವವರು ಈ ಕೆಳಗಿನ ಸ್ಥಿತಿಗಳನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಒಮ್ಮೆ ವಿಚಾರಿಸಿ:
  1. ಎಚ್ಐವಿ/ಏಡ್ಸ್ ಅಥವಾ ಅವರ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಯಾವುದೇ ಇತರ ರೋಗವನ್ನು ಹೊಂದಿರುವ ವ್ಯಕ್ತಿಗಳು
  2. ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸ್ಟೀರಾಯ್ಡ್ಗಳು, 2 ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ರೀತಿಯ ಔಷಧಿಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳು
  3. ಯಾವುದೇ ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗಳು
  4. ಔಷಧ ಅಥವಾ ರೇಡಿಯೇಷನ್ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು
  5. ಇತ್ತೀಚಿಗೆ ರಕ್ತ ಅಥವಾ ಇತರ ರಕ್ತ ಕಣಗಳ ವರ್ಗಾವಣೆಯನ್ನು ಮಾಡಿಕೊಂಡ ವ್ಯಕ್ತಿಗಳು

ಮಕ್ಕಳಿಗಾಗಿ ಯೋಜನೆ* ಮಾಡುತ್ತಿರುವ ಮಹಿಳೆ ಮತ್ತು ಗರ್ಭಿಣಿ ಮಹಿಳೆ
*ಎಂಎಂಆರ್ ಲಸಿಕೆಯನ್ನು ಗರ್ಭವಾಸ್ಥೆಯ ಯೋಜನೆ ರೂಪಿಸುವ 3 ತಿಂಗಳ ಮೊದಲು ತೆಗೆದುಕೊಳ್ಳಬೇಕು

ನಾನು ಹೇಗೆ ನನ್ನ ಮಗುವನ್ನು ಮಂಪ್ಸ್ ನಿಂದ ರಕ್ಷಿಸಬಹುದು?

ಮಂಪ್ಸ್ ವಿರುದ್ಧ ಮಕ್ಕಳನ್ನು ರಕ್ಷಿಸಲು ಮಂಪ್ಸ್ ಲಸಿಕೆ (ಎಂಎಂಆರ್ ಲಸಿಕೆ) ಒಂದು ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

  • ಇತರ ತಡೆಗಟ್ಟುವ ಕ್ರಮಗಳೆಂದರೆ :
  • ಸೋಂಕಿತ ವ್ಯಕ್ತಿಗಳಿಂದ ದೂರ ಉಳಿಯುವುದು
  • ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು .

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker