You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಪರ್ಟುಸಿಸ್, ಇದನ್ನು ಸಾಮಾನ್ಯವಾಗಿ ನಾಯಿ ಕೆಮ್ಮು ಅಥವಾ ವೂಫಿಂಗ್ ಕಫ್ ಎಂದು ಕರೆಯುತ್ತಾರೆ. ಇದೊಂದು ಸಾಂಕ್ರಾಮಿಕ ಶ್ವಾಸಕೋಶದ ಸೋಂಕಾಗಿದೆ ಮತ್ತು ಇದನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಪರ್ಟುಸಿಸ್ ಶಿಶುಗಳಲ್ಲಿ ಬಹಳ ಅಪಾಯಕಾರಿ ಕಾಯಿಲೆಯಾಗಿದ್ದು ಈ ವಯಸ್ಸಿನ ಗುಂಪಿನವರಲ್ಲಿ ರೋಗ ಮತ್ತು ಸಾವಿಗೆ ಅತಿ ಮುಖ್ಯ ಕಾರಣವಾಗಿದೆ.
  • 1 ವರ್ಷಕ್ಕಿಂತ ಕೆಳಗಿನ ಅರ್ಧದಷ್ಟು ಮಕ್ಕಳಿಗೆ ಬರುವ ಪರ್ಟುಸಿಸ್ ರೋಗದಲ್ಲಿ ಆಸ್ಪತ್ರೆ ಆರೈಕೆಯ ಅಗತ್ಯವಿರುತ್ತದೆ.
ಇನ್ನು ತಡ ಮಾಡಬೇಡಿ!

ಪರ್ಟುಸಿಸ್ ಕುರಿತು ನಿಮ್ಮ ವೈದ್ಯರೊಂದಿಗೆ ಮಾತನಾಡಿ.

ಪರ್ಟುಸಿಸ್ ಲಸಿಕೆಯನ್ನು ತೆಗದುಕೊಳ್ಳುವುದರಿಂದ ಉಂಟಾಗುವ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಪರ್ಟುಸಿಸ್ ಲಸಿಕೆ(ವ್ಯಾಕ್ಸಿನೇಷನ್) ನಿಂದ ಸೂಜಿ ಚುಚ್ಚಿದ ಜಾಗದಲ್ಲಿ ನೋವು, ಕೆಂಪಗಾಗುವುದು ಅಥವಾ ಊತ ರೀತಿಯ ಸೌಮ್ಯ ರೂಪದ ಪರಿಣಾಮಗಳು ಕಾಣಿಸಿಕೊಳ್ಳಬಹುದು.

ಒಂದುವೇಳೆ ತೀವ್ರ ಲಕ್ಷಣಗಳಿದ್ದಲ್ಲಿ, ತಕ್ಷಣವೇ ನಿಮ್ಮ ಮಕ್ಕಳ ತಜ್ಞರನ್ನು ಭೇಟಿಯಾಗಿ.

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿಯಾಗಿ.

ಯಾವಾಗ ಮಗುವಿಗೆ ಡಿಫ್ತಿರಿಯಾಗಾಗಿ ಲಸಿಕೆಯನ್ನು ಹಾಕಿಸಬೇಕು?

ಟೆಟಾನಸ್ ಮತ್ತು ಪರ್ಟುಸಿಸ್ ಜೊತೆಗೆ ಸಂಯೋಜನೆಯಾಗಿರುವ ಡಿಫ್ತಿರಿಯಾ ಲಸಿಕೆಯು ಇತರ ಎರಡು ರೋಗಗಳನ್ನು ಒಳಗೊಂಡಂತೆ ಡಿಫ್ತಿರಿಯಾ ವಿರುದ್ಧ ಮಕ್ಕಳಿಗೆ ರಕ್ಷಣೆಯನ್ನು ನೀಡುತ್ತದೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್(ಐಎಪಿ), ಲಸಿಕೆಗಳು ಮತ್ತು ಇಮ್ಮ್ಯೂನೈಸೇಷನ್ ಅಭ್ಯಾಸಗಳ ಸಲಹಾ ಸಮಿತಿಯ ಪ್ರಕಾರ ಈ ಲಸಿಕೆಯನ್ನು 3 ಡೋಸ್ ಗಳಲ್ಲಿ ಕೆಳಗಿನ ವಯಸ್ಸಿನಲ್ಲಿ ನೀಡಲಾಗುತ್ತದೆ:

6 ವಾರಗಳು
10 ವಾರಗಳು
14 ವಾರಗಳು

ಇದೇ ರೀತಿಯಾಗಿ, ಬೂಸ್ಟರ್ ಡೋಸ್ ಗಳನ್ನು 16-18 ತಿಂಗಳಲ್ಲಿ ಮತ್ತು 4-6 ವರ್ಷಗಳಲ್ಲಿ ನೀಡಲಾಗುತ್ತದೆ.

10-12 ವರ್ಷಗಳಲ್ಲಿ ಟಿಡ್ಯಾಪ್ (ಕಡಿಮೆಯಾದ ಪ್ರತಿಜನಕ ಸಂಯೋಜಿತ ಟೆಟನಸ್, ಡಿಫ್ತಿರಿಯಾ ಮತ್ತು ಎಸೆಲ್ಯುಲರ್ ಪೆರ್ಟುಸಿಸ್).

ವಯಸ್ಕರಿಗೂ ಸಹ ಬೂಸ್ಟರ್ ಡೋಸ್‌ಗಳು (ಟಿಡ್ಯಾಪ್) ಅಗತ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

ಅದಾಗಿಯೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಪರ್ಟುಸಿಸ್ ರೋಗದ ಲಕ್ಷಣಗಳು ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳು

ಪರ್ಟುಸಿಸ್ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿಗೆ ಒಳಪಟ್ಟ 5-10 ದಿನಗಳ ನಂತರ ಆರಂಭವಾಗುತ್ತದೆ. ಕೆಲವು ಪ್ರಕರಣಗಳಲ್ಲಿ 3 ವಾರಗಳವರೆಗೆ ಲಕ್ಷಣಗಳು ಕಂಡುಬರುವುದಿಲ್ಲ.

ಪರ್ಟುಸಿಸ್ ಆರಂಭಿಕ ಲಕ್ಷಣಗಳು ಸಾಮಾನ್ಯ ನೆಗಡಿಯ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಇವು 1 ರಿಂದ 2 ವಾರಗಳವರೆಗೆ ಇರಬಹುದು. ಸಿಡಿಸಿ ಪ್ರಕಾರವಾಗಿ, ಕೆಲವು ಸಾಮಾನ್ಯ ಲಕ್ಷಣಗಳೆಂದರೆ:

ಮೂಗು ಸೋರುವುದು

ಸ್ವಲ್ಪ ಜ್ವರ

ಸೌಮ್ಯರೂಪದ ಮತ್ತು ಆಗಾಗ್ಗೆ ಕೆಮ್ಮು ಬರುವುದು

ಆಪ್ನಿಯಾ - ಮಲಗಿದ್ದಾಗ ಉಸಿರಾಟದ ಸಮಸ್ಯೆಗಳು (ವಿಶೇಷವಾಗಿ ಶಿಶುಗಳಲ್ಲಿ)

ಮುಂದಿನ ಹಂತದಲ್ಲಿ ಈ ಕೆಳಗಿನ ಲಕ್ಷಣಗಳು ತೋರಬಹುದು:

ವೂಫ್ ಶಬ್ದ ಇರುವ ತ್ವರಿತ ಕೆಮ್ಮು (ಪ್ಯಾರೊಕ್ಸಿಸಮ್ಗಳು)

ವಾಂತಿ

ಕೆಮ್ಮಿದ ನಂತರ ವಿಪರೀತ ಆಯಾಸ

ಕೆಮ್ಮು ಕನಿಷ್ಠ 10 ವಾರಗಳವರೆಗೆ ಮುಂದುವರೆಯಬಹುದು. ಕೆಮ್ಮು ಕಡಿಮೆಯಾಗುತ್ತಾ ಮತ್ತು ಸೌಮ್ಯವಾಗಿ ಬರುವುದು ಚೇತರಿಕೆಯ ಚಿನ್ಹೆಯಾಗಿರುತ್ತದೆ

ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ನ್ಯೂಮೋನಿಯಾ ಬಹಳ ಸಾಮಾನ್ಯ ಆದರೆ ಮೂರ್ಛೆರೋಗ ಮತ್ತು ಮೆದುಳಿನ ರೋಗಗಳು ಅಪರೂಪವಾಗಿ ಉಂಟಾಗಬಹುದು.

ಪರ್ಟುಸಿಸ್ ಹೇಗೆ ಹರಡುತ್ತದೆ?

ಪರ್ಟುಸಿಸ್ ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದು ಶ್ವಾಸಕೋಶದ ಕಣಗಳ ಮೂಲಕ ಅಥವಾ ಅವರೊಂದಿಗೆ ಒಂದೇ ಸ್ಥಳವನ್ನು ಹಂಚಿಕೊಂಡಾಗ ಒಬ್ಬ ವ್ಯಕ್ತಿಯಿಂದ ಮತೊಬ್ಬರಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ ಕೆಮ್ಮಿದಾಗ, ಸೀನಿದಾಗ ಅಥವಾ ಹತ್ತಿರದ ನೇರ ಸಂಪರ್ಕದಿಂದ ಉಂಟಾಗಬಹುದು. ಕೆಮ್ಮು ಶುರುವಾದ 2 ವಾರಗಳವರೆಗೆ ಸೋಂಕಿತ ವ್ಯಕ್ತಿಯು ಇತರರಿಗೆ ರೋಗವನ್ನು ಹರಡಬಹುದು.

ಶಿಶುಗಳಿಗೆ ನೋಡಲು ಬಂದ ಆರೈಕೆದಾರರು, ಪೋಷಕರು ಮತ್ತು ಸಂಬಂಧಿಗಳು ರೀತಿಯ ಜನರ ನೇರ ಸಂಪರ್ಕದಿಂದ ಶಿಶುಗಳಲ್ಲಿ ಬರಬಹುದು. ಇವೆಲ್ಲರೂ ಯಾವುದೇ ಲಕ್ಷಣಗಳನ್ನು ಹೊಂದಿರದೇ ಇರಬಹುದು.

ಪರ್ಟುಸಿಸ್ ಎಂದರೇನು?

ಪರ್ಟುಸಿಸ್ ಒಂದು ಶ್ವಾಸಕೋಶದ ಸೋಂಕಾಗಿದ್ದು ಇದು ಬೋರ್ಡಿಟೆಲ್ಲಾ ಪರ್ಟುಸಿಸ್ ನಿಂದ ಉಂಟಾಗುತ್ತದೆ. ಈ ರೋಗವು ಅತ್ಯಧಿಕ ಸಾಂಕ್ರಾಮಿಕವಾಗಿದೆ. ಬ್ಯಾಕ್ಟೀರಿಯಾ ಮೇಲ್ಭಾಗದ ಶ್ವಾಸಕೋಶದ ನಾಳದಲ್ಲಿರುವ ಕೂದಲು ರೀತಿಯ ಸಣ್ಣ ಸಣ್ಣ ವಿಸ್ತರಣೆಗಳಾದ ಸಿಲಿಯಾಯೊಂದಿಗೆ ಅಂಟಿಕೊಳ್ಳುತ್ತದೆ. ಹೀಗೆ ಇದು ಸಿಲಿಯಾ ಹಾನಿಗೊಳಿಸುವ ವಿಷಕಾರಕಗಳನ್ನು ಬಿಡುಗಡೆಗೊಳಿಸುತ್ತದೆ.

ಸೋಂಕಿರುವ ವ್ಯಕ್ತಿಗೆ ವಿಪರೀತ ಕೆಮ್ಮು ಇರುತ್ತದೆ ಮತ್ತು ಉಸಿರಾಡಲು ಕಷ್ಟವಾಗುತ್ತದೆ. ಸೋಂಕು ಶಿಶುಗಳಲ್ಲಿ ಮಾರಣಾಂತಿಕವಾಗಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಾನು ಗರ್ಭಿಣಿಯಿದ್ದಾಗ ಪರ್ಟುಸಿಸ್ ಲಸಿಕೆಯನ್ನು ತೆಗೆದುಕೊಳ್ಳಬಹುದೇ?

ಮಗು ಜನಿಸಿದ ಕೆಲವು ವಾರಗಳ ನಂತರ ಪರ್ಟುಸಿಸ್ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಪರ್ಟುಸಿಸ್ ಗಾಗಿ ಲಸಿಕೆಯನ್ನು ಪಡೆಯಬಹುದು ಮತ್ತು ಈ ಮೂಲಕವಾಗಿ ಅವರು ತನ್ನ ಮಗುವಿಗೆ ಜನಿಸುವ ಮೊದಲೇ ಪ್ರತಿಕಾಯಗಳನ್ನು ನೀಡಬಹುದು.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker