You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಬ್ಯಾಕ್ಟೀರಿಯಂ ಸ್ಟ್ರೆಪ್ಟೋಕೋಕಸ್ ನ್ಯೂಮೋನಿಯೇ ಇಂದ ಉಂಟಾಗುವ ಸೋಂಕನ್ನು ನ್ಯೂಮೋಕೋಕಲ್ ರೋಗ ಎಂದು ಕರೆಯುತ್ತಾರೆ. ರೋಗದ ವಿರುದ್ಧ ರಕ್ಷಣೆ ಪಡೆಯುವುದಕ್ಕಾಗಿ ನ್ಯೂಮೋಕೋಕಲ್ ಲಸಿಕೆ ಒಂದು ಪರಿಣಾಮಕಾರಿ ವಿಧಾನವಾಗಿದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • 2 ವರ್ಷಕ್ಕಿಂತ ಕೆಳಗಿರುವ ಮಕ್ಕಳು ನ್ಯೂಮೋಕೋಕಲ್ ರೋಗವು ಬರುವ ಸಾಧ್ಯತೆಗೆ ಹೆಚ್ಚಿನ ಅಪಾಯದಲ್ಲಿದ್ದಾರೆ.
  • ಲಸಿಕೆ ತಡೆಗಟ್ಟಬಲ್ಲ ಸಾವುಗಳ ಕಾರಣಗಳಲ್ಲಿ ನ್ಯೂಮೋಕೋಕಲ್ ರೋಗವು ನಂಬರ್ ಒನ್ ಆಗಿದೆ.
ಇನ್ನು ತಡ ಮಾಡಬೇಡಿ!

ಇಂದೇ ನ್ಯೂಮೋಕೋಕಲ್ ಲಸಿಕೆ(ವ್ಯಾಕ್ಸಿನೇಷನ್) ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.

ನ್ಯೂಮೋಕೋಕಲ್ ಲಸಿಕೆ(ವ್ಯಾಕ್ಸಿನೇಷನ್) ಹಾಕಿಸಿದ ನಂತರ ಕಂಡುಬರುವ ಅಡ್ಡ ಪರಿಣಾಮಗಳು ಯಾವುವು?

ಯಾವುದೇ ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿದರೂ ಸೌಮ್ಯ ರೂಪದ ಕೆಲವು ಅಡ್ಡ ಪರಿಣಾಮಗಳ ಸಾಧ್ಯತೆಗಳಿರುತ್ತವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ ಆದರೆ ಇಷ್ಟಕ್ಕೆ ಸೀಮಿತವಾಗುವುದಿಲ್ಲ.

● ಕೆಂಪಾಗುವುದು
● ಊತ
● ಸೂಜಿ ಚುಚ್ಚಿದ ಜಾಗದಲ್ಲಿ ನೋವು
● ಜ್ವರ
● ಹಸಿವು ಕಡಿಮೆಯಾಗುವುದು
● ತಲೆ ನೋವು
● ನಡುಕ

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿಯಾಗಿ.

ನೀವು ಹೇಗೆ ನಿಮ್ಮ ಮಗುವಿಗೆ ನ್ಯೂಮೋಕೋಕಲ್ ರೋಗದಿಂದ ಸುರಕ್ಷೆ ನೀಡಬಹುದು?

ನ್ಯೂಮೋಕೋಕಲ್ ರೋಗವನ್ನು ತಡೆಗಟ್ಟುವುದಕ್ಕಾಗಿ ನ್ಯೂಮೋಕೋಕಲ್ ಲಸಿಕೆ(ವ್ಯಾಕ್ಸಿನೇಷನ್) ಪರಿಣಾಮಕಾರಿ ವಿಧಾನವಾಗಿದೆ.

ನಿಮ್ಮ ಮಗುವಿನ ರಕ್ಷಣೆಗಾಗಿ ಸಹಾಯಮಾಡುವ ಅಥವಾ ರೋಗದ ಹರಡುವಿಕೆಯನ್ನು ತಡೆಗಟ್ಟಲು ಇತರ ವಿಧಾನಗಳೆಂದರೆ:

  • ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮುಚ್ಚಿಕೊಳ್ಳುವುದು
  • ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳುವುದು
  • ಎದೆ ಹಾಲುಣಿಸುವುದು
  • ಹೊಗೆ ರಹಿತ ಪರಿಸರ
ನ್ಯೂಮೋಕೋಕಲ್ ರೋಗದ ಲಕ್ಷಣಗಳು ಮತ್ತು ಅದರಿಂದಾಗಬಹುದಾದ ಗಂಭೀರ ಸಮಸ್ಯೆಗಳು ಯಾವುವು?

ನ್ಯೂಮೋಕೋಕಲ್ ರೋಗದ ಲಕ್ಷಣಗಳು ಸೋಂಕು ಒಳಗೊಂಡ ಅಂಗಾಂಗವನ್ನು ಆಧರಿಸಿದೆ ಮತ್ತು ಲಕ್ಷಣಗಳು ಸೌಮ್ಯ ರೀತಿಯಿಂದ ತೀವ್ರ ರೂಪದ್ದಾಗಿರಬಹುದು. ಲಕ್ಷಣಗಳೂ ಸಹ ಕೆಳಗೆ ತೋರಿಸಿರುವ ಸೋಂಕಿನ ವಿಧಾನವನ್ನು ಆಧರಿಸುತ್ತದೆ ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ:

ನ್ಯೂಮೋನಿಯಾ (ಶ್ವಾಸಕೋಶ ಸೋಂಕು)

  • ಜ್ವರ ಮತ್ತು ನಡುಕ
  • ಜೋರು ಉಸಿರಾಟ ಅಥವಾ ಉಸಿರಾಟದಲ್ಲಿ ತೊಂದರೆ
  • ಕೆಮ್ಮು
  • ಎದೆ ನೋವು

ಮೆನಿಂಜೈಟಿಸ್ (ಮೆದುಳು ಪದರ ಹಾಗೂ ಮೆದುಳು ಬಳ್ಳಿಯ ಸೋಂಕು)

  • ಕುತ್ತಿಗೆಯಲ್ಲಿ ಬಿಗಿತ
  • ಜ್ವರ
  • ತಲೆ ನೋವು
  • ಬೆಳಕಿಗೆ ಅಸಹಿಷ್ಣುತೆ
  • ಗೊಂದಲ

ಬ್ಯಾಕ್ಟೀರೆಮಿಯಾ (ರಕ್ತದ ಸೋಂಕು)

  • ನಡುಕ
  • ಜ್ವರ
  • ಜಾಗರೂಕತೆ ಕಡಿಮೆಯಾಗುವುದು

ಸೆಪ್ಸಿಸ್ (ಸೋಂಕಿಗೆ ತೀವ್ರತರ ಪ್ರತಿಕ್ರಿಯೆ)

  • ದಿಗ್ಭ್ರಮೆ ಅಥವಾ ಗೊಂದಲ
  • ಉಸಿರಾಟದ ತೊಂದರೆ
  • ಜ್ವರ ಮತ್ತು ನಡುಕ
  • ಒದ್ದೆಯಾದ, ಬೆವರುವ ಚರ್ಮ
  • ಅಧಿಕ ಹೃದಯ ಬಡಿತ
  • ತೀವ್ರ ನೋವು ಅಥವಾ ಅಸ್ವಸ್ಥತೆ

ಮಧ್ಯದ ಕಿವಿ ಸೋಂಕು (ಒಟೈಟಿಸ್ ಮೀಡಿಯಾ)

  • ಕಿವಿಯಲ್ಲಿ ನೋವು
  • ಕೆಂಪಗಾದ, ಊದಿಕೊಂಡ ಕಿವಿ ತಮಟೆ
  • ಜ್ವರ
  • ಅತಿಯಾದ ನಿದ್ದೆ

ಸೈನಸ್ ಸೋಂಕು

  • ತಲೆನೋವು
  • ಮೂಗು ಸೋರುವುದು ಅಥವಾ ಕಟ್ಟಿದ ಮೂಗು
  • ವಾಸನೆ ಬಾರದಿರುವುದು
  • ಮುಖದ ಮೇಲೆ ನೋವು ಅಥವಾ ಒತ್ತಡ ಎನಿಸುವುದು
  • ಪೋಸ್ಟ್ನಾಸಲ್ ಡ್ರಿಪ್
ನ್ಯೂಮೋಕೋಕಲ್ ರೋಗ ಹೇಗೆ ಹರಡುತ್ತದೆ?

ನ್ಯೂಮೋಕೋಕಲ್ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಜನರಿಂದ ಜನಕ್ಕೆ ಶ್ವಾಸಕೋಶದ ಹನಿಗಳ ಮೂಲಕ ಹಾಗೂ ಎಂಜಲು ಹಾಗೂ ಲೋಳೆ ರೀತಿಯ ಸ್ರಾವಗಳಿಂದ ಹರಡುತ್ತದೆ.

ಅನೇಕ ಜನರು, ವಿಶೇಷವಾಗಿ ಮಕ್ಕಳು ಈ ಬ್ಯಾಕ್ಟೀರಿಯಾದ ಲಕ್ಷಣರಹಿತ ಕ್ಯಾರಿಯರ್ ಆಗಿದ್ದು ಇತರರಿಗೆ ರೋಗಗಳನ್ನು ಹರಡಬಲ್ಲರು.

ನ್ಯೂಮೋಕೋಕಲ್ ರೋಗ ಎಂದರೇನು?

ಬ್ಯಾಕ್ಟೀರಿಯಂ ಸ್ಟ್ರೆಪ್ಟೋಕೋಕಸ್ ನ್ಯೂಮೋನಿಯೇ ಇಂದ ಉಂಟಾಗುವ ಸೋಂಕನ್ನು ನ್ಯೂಮೋಕೋಕಲ್ ರೋಗ ಎಂದು ಕರೆಯುತ್ತಾರೆ. ಇದರಲ್ಲಿ ನ್ಯೂಮೋನಿಯಾ, ಸೆಪ್ಟಿಸಿಮಿಯಾ ಮತ್ತು ಮೆನಿಂಜೈಟಿಸ್ ರೀತಿಯ ತೀವ್ರ ರೋಗಗಳಿಂದ ಕಡಿಮೆ ಗಂಭೀರವಾದರೂ ಸಾಮಾನ್ಯ ಸೋಂಕುಗಳಾದ ಸೈನುಸೈಟಿಸ್ ಮತ್ತು ಒಟೈಟಿಸ್ ಮೀಡಿಯಾ(ಮಧ್ಯ ಕಿವಿ ಸೋಂಕು) ಆಗುವ ಸಾಧ್ಯತೆ ಇರುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

5 ವರ್ಷದೊಳಗಿನ ಮಕ್ಕಳಲ್ಲಿ ನ್ಯೂಮೋಕೋಕಲ್ ರೋಗ ಎಷ್ಟು ಗಂಭೀರವಾದದ್ದು?

5 ವರ್ಷದೊಳಗಿನ ಮಕ್ಕಳ ಸಾವುಗಳ ಪ್ರಮುಖ ಕಾರಣಗಳಲ್ಲಿ ನ್ಯೂಮೋಕೋಕಲ್ ರೋಗವು ಮುಂಚೂಣಿಯಲ್ಲಿದೆ ಮತ್ತು ಇದು ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ರೀತಿಯ ಜೀವ ಮಾರಕ ರೋಗಗಳಿಗೆ ಕಾರಣವಾಗಬಲ್ಲದು.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker