You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ರುಬೆಲ್ಲಾ ಒಂದು ಸಾಂಕ್ರಾಮಿಕ ರೋಗವಾಗಿದ್ದು ರುಬೆಲ್ಲಾ ವೈರಾಣುವಿನಿಂದ ಹರಡುತ್ತದೆ, ಮತ್ತು ಇದನ್ನು ರುಬೆಲ್ಲಾ ಲಸಿಕೆ(ಎಂಎಂಆರ್ ಲಸಿಕೆ) ಸಹಾಯದಿಂದ ತಡೆಗಟ್ಟಬಹುದು.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ರುಬೆಲ್ಲಾ ವಿರುದ್ಧ ರಕ್ಷಣೆಯನ್ನು ನೀಡಲು ಕೊಡುವ ಲಸಿಕೆಗಳು ಮಂಪ್ಸ್ ಮತ್ತು ಮೀಸಲ್ಸ್ ಜೊತೆಗೆ ಸಂಯೋಜನೆಯನ್ನು ಬರುತ್ತದೆ.
ಇನ್ನು ತಡ ಮಾಡಬೇಡಿ!

ಗರ್ಭಕಂಠದ ಕ್ಯಾನ್ಸರ್ ಲಸಿಕೆಯ(ವ್ಯಾಕ್ಸಿನೇಷನ್) ಕುರಿತು ನಿಮ್ಮ ವೈದ್ಯರೊಂದಿಗೆ ಇಂದೇ ಮಾತನಾಡಿ. 

ರುಬೆಲ್ಲಾ ಲಸಿಕೆಯಿಂದ(ಎಂಎಂಆರ್ ಲಸಿಕೆ) ಯೊಂದಿಗೆ ಸಂಬಂಧಿಸಿದ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಅನೇಕ ಮಕ್ಕಳು ಲಸಿಕೆಯ ನಂತರ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಒಂದುವೇಳೆ ಅಡ್ಡಪರಿಣಾಮಗಳಿದ್ದರೆ ಅವು ಸೌಮ್ಯ ರೂಪದ್ದಾಗಿರುತ್ತದೆ ಮತ್ತು ಅವುಗಳೆಂದರೆ:

ಸೂಜಿ ಚುಚ್ಚಿದ ಸ್ಥಳದಲ್ಲಿ ನೋವು, ಊತ ಮತ್ತು ಕೆಂಪಗಾಗುವುದು

  • ಜ್ವರ
  • ಸಣ್ಣ ದದ್ದುಗಳು
  • ತಾತ್ಕಾಲಿಕ ನೋವು ಮತ್ತು ಕೀಲುಗಳಲ್ಲಿ ಬಿರುಸುತನ

ಅಡ್ಡ ಪರಿಣಾಮಗಳ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ನಿಮ್ಮ ವೈದ್ಯರನ್ನು ಭೇಟಿಮಾಡಿ.

ಒಂದು ಮಗು ಯಾವಾಗ ಮೀಸಲ್ಸ್ ಲಸಿಕೆ (ಎಂಎಂಆರ್ ಲಸಿಕೆ) ಹಾಕಿಸಬೇಕು?

ಮಕ್ಕಳು ಮೂರು ಡೋಸ್ ಗಳನ್ನು ಪಡೆಯಬೇಕು:

  • 9 ತಿಂಗಳುಗಳಲ್ಲಿ 1ನೆಯ ಡೋಸ್
  • 15 ತಿಂಗಳುಗಳಲ್ಲಿ 2ನೆಯ ಡೋಸ್
  • 4-6 ವರ್ಷಗಳ ನಡುವೆ 3ನೆಯ ಡೋಸ್

3ನೆಯ ಡೋಸ್ ಅನ್ನು ಎರಡನೆಯ ಡೋಸ್ ಹಾಕಿಸಿದ 8 ವಾರಗಳ ನಂತರ ಯಾವುದೇ ಸಮಯದಲ್ಲಿ ಹಾಕಿಸಬಹುದು.

ಕ್ಯಾಚ್-ಅಪ್ ವ್ಯಾಕ್ಸಿನೇಷನ್(ಲಸಿಕೆ)

ಈ ಹಿಂದೆ ಮಂಪ್ಸ್ ಲಸಿಕೆ(ವ್ಯಾಕ್ಸಿನೇಷನ್) ಪಡೆಯದ ಶಾಲೆಗೆ ಹೋಗುವ ಎಲ್ಲಾ ಮಕ್ಕಳು ಮತ್ತು ಹದಿಹರೆಯದವರು 2 ಡೋಸ್ ಗಳನ್ನೂ ಪಡೆಯಬೇಕು

ಒಂದುವೇಳೆ ಒಮ್ಮೆ ಲಸಿಕೆಯನ್ನು ಪಡೆದುಕೊಂಡಿದ್ದರೆ, ಕೇವಲ ಒಂದು ಡೋಸ್ ನೀಡಿದರೆ ಸಾಕು

2 ಡೋಸ್ ಗಳ ನಡುವಿನ ಅಂತರವು 4 ವಾರಗಳು ಇರಬೇಕು

ಆದಾಗಿಯೂ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ

ರುಬೆಲ್ಲಾ ಲಕ್ಷಣಗಳು ಮತ್ತು ಅದರ ಗಂಭೀರ ಸಮಸ್ಯೆಗಳು ಯಾವುವು?

ಸಾಮಾನ್ಯವಾಗಿ ಮಕ್ಕಳಲ್ಲಿ ಲಕ್ಷಣಗಳು ಬಹಳ ಸೌಮ್ಯ ರೂಪದಲ್ಲಿರುತ್ತವೆ, ಲಕ್ಷಣಗಳೆಂದರೆ:

ಮುಖದ ಮೇಲೆ ಶುರುವಾಗುವ ಗುಳ್ಳೆಗಳು ನಂತರ ಇಡೀ ದೇಹಕ್ಕೆ ಹರಡುತ್ತದೆ
ಜ್ವರ
ಗಂಟಲು ನೋವು
ಕಂಜಕ್ಟಿವೈಟಿಸ್, ಕಣ್ಣಿನ ಉರಿಯೂತ
ವಾಕರಿಕೆ
ಕೆಲವು ದೊಡ್ಡ ಮಕ್ಕಳು ಮತ್ತು ವಯಸ್ಕರಲ್ಲಿ ತಲೆನೋವೂ ಇರಬಹುದು ಮತ್ತು ದದ್ದುಗಳು ಕಾಣಿಸಿಕೊಳ್ಳುವ ಮುನ್ನ ಸಾಮಾನ್ಯ ಅನಾರೋಗ್ಯ ಇರುತ್ತದೆ.

ಸೋಂಕಿತ ವಯಸ್ಕರು, ವಿಶೇಷವಾಗಿ ಮಹಿಳೆಯರು ಕೀಲುಗಳಲ್ಲಿ ನೋವು ಅಥವಾ ಸಂಧಿವಾತ ಸಮಸ್ಯೆಯಿಂದ ಬಳಲಬಹುದು. ಮತ್ತು ಇದು 3 ರಿಂದ 10 ದಿನಗಳವರೆಗೆ ಇರುತ್ತದೆ.

ಗಂಭೀರ ಲಕ್ಷಣಗಳು

ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ರುಬೆಲ್ಲಾ ಸೋಂಕು ಗರ್ಭಪಾತ ಅಥವಾ ತೀವ್ರ ರೂಪದ ಜನ್ಮ ದೋಷಗಳಿಗೆ ಕಾರಣವಾಗಬಹುದು. ಇದೊಂದು ರುಬೆಲ್ಲಾ ಸೋಂಕಿನ ಗಂಭೀರ ಪರಿಣಾಮ.

ಕಾಂಜನೈಟಲ್ ರುಬೆಲ್ಲಾ ಸಿಂಡ್ರೋಮ್(ಸಿ ಆರ್ ಎಸ್) ಸಹ ರುಬೆಲ್ಲಾ ಸೋಂಕಿನ ಗಂಭೀರ ಪರಿಣಾಮ.

ಸಿ ಆರ್ ಎಸ್ ಇರುವ ಮಕ್ಕಳು ಸಾಮಾನ್ಯವಾಗಿ ಕಿವುಡು, ಕಣ್ಣಿನ ದೋಷಗಳು ಮತ್ತು ಹೃದಯ ಮತ್ತು ಇತರ ಜೀವನ ಪರ್ಯಂತ ಇರುವ ವಿಕಲಾಂಗತೆಗಳಾದ ಆಟಿಸಂ, ಮಧುಮೇಹ, ಥೈರಾಯ್ಡ್ ಅಸಮತೋಲನಗಳಿಂದ ಬಳಲುವ ಸಾಧ್ಯತೆಗಳಿವೆ.

ಅನೇಕರಿಗೆ ಬಹಳ ದುಬಾರಿ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳು ಮತ್ತು ಇತರ ದುಬಾರಿ ಆರೈಕೆಯ ಅಗತ್ಯವಿರುತ್ತದೆ.

ರುಬೆಲ್ಲಾ ಹೇಗೆ ಹರಡುತ್ತದೆ?

ರುಬೆಲ್ಲಾ ಸಾಮಾನ್ಯವಾಗಿ ಗಾಳಿ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ವೈರಾಣು ಗಾಳಿಯಲ್ಲಿ ಚದುರಿ ಇತರರಿಗೆ ಸೋಂಕನ್ನು ಉಂಟು ಮಾಡುತ್ತದೆ.

ಜೊತೆಗೆ ರುಬೆಲ್ಲಾ ಸೋಂಕಿರುವ ಗರ್ಭಿಣಿ ಮಹಿಳೆಯರು ಸಹ ತಮ್ಮ ಜನಿಸುವ ಮಕ್ಕಳಿಗೆ ಸೋಂಕನ್ನು ಹರಡಬಲ್ಲರು.

ರುಬೆಲ್ಲಾ ಎಂದರೇನು?

ಇದನ್ನು ಜರ್ಮನ್ ಮೀಸಲ್ಸ್ ಎಂದೂ ಸಹ ಕರೆಯಲಾಗುತ್ತದೆ, ರುಬೆಲ್ಲಾ ಒಂದು ಸಾಂಕ್ರಾಮಿಕ ವೈರಾಣುವಿನ ಸೋಂಕಾಗಿದ್ದು ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಕಾಣಿಸಿ ಕೊಳ್ಳುತ್ತದೆ. ಇದನ್ನು ಜರ್ಮನ್ ಮೀಸಲ್ಸ್ ಎಂದೂ ಕರೆದರೂ ಸಹ ಇದು ಮೀಸಲ್ಸ್ ಗಿಂತ ವಿಭಿನ್ನ ವೈರಾಣುವಿನಿಂದ ಉಂಟಾಗುತ್ತದೆ.

ಲಸಿಕೆಯಿಂದ ತಡೆಗಟ್ಟಬಲ್ಲ ಜನ್ಮ ದೋಷಗಳಿಗೆ ಈ ವೈರಾಣು ಮುಖ್ಯ ಕಾರಣವಾಗಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಎಂಎಂಆರ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಾರದು?
  • ಈ ಹಿಂದೆ ರುಬೆಲ್ಲಾ ಲಸಿಕೆಗೆ ಅಥವಾ ಲಸಿಕೆಯ ಯಾವುದೇ ಒಂದು ಅಂಶಕ್ಕೆ ಸಂಭಾವ್ಯ ಜೀವ ಮಾರಕವಾದ ಅಲರ್ಜಿಕ್ ಅಡ್ಡ ಪರಿಣಾಮವನ್ನು ಅನುಭವಿಸಿದ್ದವರು ತೆಗೆದುಕೊಳ್ಳಬಾರದು
  • ರುಬೆಲ್ಲಾ ಲಸಿಕೆಯನ್ನು ಹಾಕಿಸುವಾಗ ಅನಾರೋಗ್ಯದಿಂದ ಬಳಲುತ್ತಿದ್ದರೆ
    • ಎಂಎಂಆರ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಾರದು?
      1. ಎಚ್ಐವಿ/ಏಡ್ಸ್ ಅಥವಾ ಅವರ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಯಾವುದೇ ಇತರ ರೋಗವನ್ನು ಹೊಂದಿರುವ ವ್ಯಕ್ತಿಗಳು
      2. ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸ್ಟೀರಾಯ್ಡ್ ಗಳು, 2 ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ರೀತಿಯ ಔಷಧಿಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳು
      3. ಯಾವುದೇ ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗಳು
      4. ಔಷಧ ಅಥವಾ ರೇಡಿಯೇಷನ್ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು
      5. ಇತ್ತೀಚಿಗೆ ರಕ್ತ ಅಥವಾ ಇತರ ರಕ್ತ ಕಣಗಳ ವರ್ಗಾವಣೆಯನ್ನು ಮಾಡಿಕೊಂಡ ವ್ಯಕ್ತಿಗಳು

ಮಕ್ಕಳಿಗಾಗಿ ಯೋಜನೆ* ಮಾಡುತ್ತಿರುವ ಗರ್ಭಿಣಿ ಮಹಿಳೆ

*ರುಬೆಲ್ಲಾ ಲಸಿಕೆಯನ್ನು ಗರ್ಭವಾಸ್ಥೆಯ ಯೋಜನೆ ರೂಪಿಸುವ 3 ತಿಂಗಳ ಮೊದಲು ತೆಗೆದುಕೊಳ್ಳಬೇಕು.

ರುಬೆಲ್ಲಾ ಚಿಕಿತ್ಸೆ ಏನು?

ರುಬೆಲ್ಲಾ ರೋಗಕ್ಕಾಗಿ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಚಿಕಿತ್ಸೆ ಇಲ್ಲ. ಈ ರೋಗವನ್ನು ಹೆಚ್ಚಾಗಿ ರುಬೆಲ್ಲಾ ಲಸಿಕೆಯಿಂದ ತಡೆಗಟ್ಟಬಹುದು.

ರುಬೆಲ್ಲಾ ಎಷ್ಟು ಗಂಭೀರ ಕಾಯಿಲೆ?

ಲಸಿಕೆಯಿಂದ ತಡೆಗಟ್ಟಬಲ್ಲ ಮಕ್ಕಳ ಜನ್ಮ ದೋಷಗಳಿಗೆ ಇದು ಕಾರಣವಾಗುತ್ತದೆ. ಗರ್ಭಿಣಿ ಮಹಿಳೆಯರಲ್ಲಿ* ರುಬೆಲ್ಲಾ ಭ್ರೂಣ ಮರಣ ಅಥವಾ ಅನುವಂಶಿಕ ದೋಷಗಳಿಗೆ ಕಾರಣವಾಗುತ್ತದೆ.

ಒಂದುವೇಳೆ ಗರ್ಭಿಣಿ ಮಹಿಳೆಯರಲ್ಲಿ ರುಬೆಲ್ಲಾ ಸೋಂಕು ತಗುಲಿದರೆ ಗರ್ಭಪಾತ ಆಗಬಹುದು ಅಥವಾ ಮಗು ಹುಟ್ಟಿದ ನಂತರ ಸಾಯಬಹುದು.

ಗರ್ಭಿಣಿ ಮಹಿಳೆಯು ವೈರಾಣುವನ್ನು ತನ್ನ ಜನಿಸುವ ಮಕ್ಕಳಿಗೆ ಹರಡಬಹುದು ಮತ್ತು ಕೆಳಗಿರುವ ಜನ್ಮ ದೋಷಗಳಿಗೆ ಕಾರಣವಾಗಬಹುದು:

  • ಹೃದಯ ಸಮಸ್ಯೆಗಳು
  • ಕಿವಿ ಕಿವುಡು ಅಥವಾ ಕಣ್ಣು ಕುರುಡು
  • ಬುದ್ಧಿಮಾಂದ್ಯತೆ
  • ಲಿವರ್ ಅಥವಾ ಸ್ಪ್ಲೀನ್ ಹಾನಿ

ಮೊದಲನೆಯ ತ್ರೈಮಾಸಿಕದ ಗರ್ಭಿಣಿ ಮಹಿಳೆಯರಲ್ಲಿ ಸೋಂಕು ತಗುಲಿದಾಗ ಇಂತಹ ಗಂಭೀರ ಪರಿಣಾಮಗಳು ಬಹಳ ಸಾಮಾನ್ಯ. ಈ ರೀತಿಯ ಜನ್ಮ ದೋಷಗಳನ್ನು ಸಿ ಆರ್ ಎಸ್ ಅಥವಾ ಕಂಜನೈಟಲ್ ರುಬೆಲ್ಲಾ ಸಿಂಡ್ರೋಮ್ ಎಂದು ಕರೆಯುತ್ತಾರೆ.

*ಎಂಎಂಆರ್ ಲಸಿಕೆಯನ್ನು ಗರ್ಭಧಾರಣೆಯ ಯೋಜನೆಯನ್ನು ಮಾಡುವ 3 ತಿಂಗಳ ಮೊದಲೇ ತೆಗೆದುಕೊಳ್ಳಬೇಕು.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker