You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಟೆಟಾನಸ್ ಅಥವಾ ಲಾಕ್ ಜಾ ಎಂದೂ ಕರೆಯಲ್ಪಡುವ ಇದು ಕ್ಲೋಸ್ಟ್ರಿಡಿಯಮ್ ಟೆಟನಿ ಎನ್ನುವ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುತ್ತದೆ.

ಐಎಪಿ* ಇಂದ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. ಲಸಿಕೆ(ವ್ಯಾಕ್ಸಿನೇಷನ್) ಮತ್ತು ಇಮ್ಮ್ಯುನೈಸೇಷನ್ ಸಲಹಾ ಸಮಿತಿ ಅಭ್ಯಾಸಗಳು(ಐಸಿವಿಐಪಿ)*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
ಒಂದುವೇಳೆ ನೀವು ಲಸಿಕೆಯನ್ನು(ವ್ಯಾಕ್ಸಿನೇಷನ್) ಮರೆತರೆ ಏನು ಮಾಡಬೇಕು?
ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್)

ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.

ನಿಮಗಿದು ಗೊತ್ತೇ?
  • ಟೆಟಾನಸ್ ಗೆ ಕಾರಣವಾಗಿರುವ ಬ್ಯಾಕ್ಟೀರಿಯಾ ಮಣ್ಣನ್ನು ಸೇರಿದಂತೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುತ್ತವೆ ಮತ್ತು ಇವುಗಳು ಕತ್ತರಿಸಿದ ಗಾಯ, ತರುಚು ಗಾಯ ಮತ್ತು ತೆರೆದ ಗಾಯಗಳಿಂದ ದೇಹವನ್ನು ಪ್ರವೇಶಿಸುತ್ತವೆ.
  • ನಿಮಗೆ ಟೆಟಾನಸ್ ಸೋಂಕು ದಂತ ವೈದ್ಯಕೀಯ ಚಿಕಿತ್ಸೆಗಳು, ಶಸ್ತ್ರಚಿಕಿತ್ಸಾ ವಿಧಾನಗಳು, ಮೂಳೆ ಮುರಿತಗಳು ಮತ್ತು ಐವಿ ಮೂಲಕ ಔಷಧಗಳನ್ನು ನೀಡುವಾಗಲೂ ಸಹ ಬರುವ ಸಾಧ್ಯತೆಗಳಿರುತ್ತದೆ.
ಇನ್ನು ತಡ ಮಾಡಬೇಡಿ!

Talk to your doctor about the Tetanus Vaccination.

ಟೆಟಾನಸ್ ಲಸಿಕೆ(ವ್ಯಾಕ್ಸಿನೇಷನ್) ಹಾಕಿಸಿದ ನಂತರದ ಸಾಮಾನ್ಯ ಅಡ್ಡ ಪರಿಣಾಮಗಳು ಯಾವುವು?

ಹಲವು ಲಸಿಕೆಗಳ ರೀತಿಯಲ್ಲಿ, ಟೆಟಾನಸ್ ಲಸಿಕೆಯಲ್ಲಿಯೂ ಸಹ ಸೂಜಿ ಚುಚ್ಚಿದ ಜಾಗದಲ್ಲಿ ನೋವು, ಕೆಂಪಗಾಗುವುದು ಮತ್ತು ಊತವಿರುತ್ತದೆ. ಕೆಲವು ಇತರ ಅಪರೂಪವಾದರೂ ಗಂಭೀರವಾದಂತಹ ಅಡ್ಡ ಪರಿಣಾಮಗಳೆಂದರೆ ಮೂರ್ಛೆರೋಗ, ಕೋಮಾ, ಶಾಶ್ವತ ಮೆದುಳು ಹಾನಿ ಮತ್ತು ಗಮನವಿಲ್ಲದಿರುವುದು ಸಹ ಉಂಟಾಗಬಹುದು.
ಒಂದುವೇಳೆ ನೀವು ಇಂತಹ ಯಾವುದೇ ಲಕ್ಷಣಗಳನ್ನು ಗಮನಿಸಿದರೆ ಇದರ ಕುರಿತು ನಿಮ್ಮ ಮಕ್ಕಳ ತಜ್ಞರಿಗೆ ತಕ್ಷಣವೇ ತಿಳಿಸಿ.
ಅಡ್ಡ ಪರಿಣಾಮಗಳ ಕುರಿತು ಹೆಚ್ಚು ತಿಳಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಯಾವಾಗ ಮಗುವಿಗೆ ಟೆಟಾನಸ್ ಲಸಿಕೆಯನ್ನು ಹಾಕಿಸಬೇಕು?

ಪರ್ಟುಸಿಸ್ ಲಸಿಕೆಯು ಟೆಟನಸ್ ಮತ್ತು ಡಿಫ್ತಿರಿಯ ಜೊತೆಯಾಗಿ ಸಂಯೋಜಿತ ಲಸಿಕೆಯಾಗಿ ದೊರೆಯುತ್ತದೆ. ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್(ಐಎಪಿ), ಲಸಿಕೆಗಳು ಮತ್ತು ಇಮ್ಮ್ಯೂನೈಸೇಷನ್ ಅಭ್ಯಾಸಗಳ ಸಲಹಾ ಸಮಿತಿಯ ಪ್ರಕಾರ ಈ ಲಸಿಕೆಯನ್ನು 3 ಡೋಸ್ ಗಳಲ್ಲಿ ಕೆಳಗಿನ ವಯಸ್ಸಿನಲ್ಲಿ ನೀಡಲಾಗುತ್ತದೆ:
6 ವಾರಗಳು
10 ವಾರಗಳು
14 ವಾರಗಳು
ಇದೇ ರೀತಿಯಾಗಿ, ಬೂಸ್ಟರ್ ಡೋಸ್ ಗಳನ್ನು 16-18 ತಿಂಗಳಲ್ಲಿ ಮತ್ತು 4-6 ವರ್ಷಗಳಲ್ಲಿ ನೀಡಲಾಗುತ್ತದೆ.
10-12 ವರ್ಷಗಳಲ್ಲಿ ಟಿಡ್ಯಾಪ್ (ಕಡಿಮೆಯಾದ ಪ್ರತಿಜನಕ ಸಂಯೋಜಿತ ಟೆಟನಸ್, ಡಿಫ್ತಿರಿಯಾ ಮತ್ತು ಎಸೆಲ್ಯುಲರ್ ಪೆರ್ಟುಸಿಸ್).
ವಯಸ್ಕರಿಗೂ ಸಹ ಬೂಸ್ಟರ್ ಡೋಸ್‌ಗಳು (ಟಿಡ್ಯಾಪ್) ಅಗತ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

ಅದಾಗಿಯೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಡಿಫ್ತಿರಿಯಾ ರೋಗದ ಲಕ್ಷಣಗಳು ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳು

ಸಾಮಾನ್ಯವಾಗಿ ಡಿಫ್ತಿರಿಯಾ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ವ್ಯಕ್ತಿಗೆ ಉಸಿರಾಟದಲ್ಲಿ ಮತ್ತು ಆಹಾರ ನುಂಗುವುದರಲ್ಲಿ ಸಮಸ್ಯೆಯಾಗುತ್ತದೆ. ಬ್ಯಾಕ್ಟೀರಿಯಾ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ಸಿಡಿಸಿ ಪ್ರಕಾರವಾಗಿ, ಡಿಫ್ತಿರಿಯಾದ ಸಾಮಾನ್ಯ ಲಕ್ಷಣಗಳೆಂದರೆ :
ಆಯಾಸ
ಗಂಟಲು ನೋವು
ಸ್ವಲ್ಪ ಜ್ವರ
ಕುತ್ತಿಗೆಯಲ್ಲಿ ಊದಿದ ಗ್ರಂಥಿಗಳು
ಇದನ್ನು ಹೊರತುಪಡಿಸಿ, ಬ್ಯಾಕ್ಟೀರಿಯಾ ವಿಷಕಾರಕಗಳನ್ನು ರಚಿಸುತ್ತವೆ ಇದರ ಮೂಲಕ ಮಿಥ್ಯ ಪದರವನ್ನು ರಚಿಸುತ್ತದೆ. ಇದು ನಿಮ್ಮ ಗಂಟಲು ಮತ್ತು ಮೂಗಿನ ಸತ್ತ ಕೋಶಗಳಾಗಿದ್ದು ಇದು ಬ್ಯಾಕ್ಟೀರಿಯಾದಿಂದ ಸತ್ತಿರುತ್ತದೆ. ಒಂದುವೇಳೆ ಇದನ್ನು ಅಲ್ಲಿಯೇ ಬೆಳೆಯಲು ಅವಕಾಶ ನೀಡಿದರೆ, ವಿಷಕಾರಕಗಳು ರಕ್ತದಲ್ಲಿ ಸೇರಿಕೊಳ್ಳುತ್ತದೆ, ಇದರ ಪಾರಿಣಾಮವಾಗಿ ಕಿಡ್ನಿ, ಹೃದಯ ಮತ್ತು ನರಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಚರ್ಮದ ಮೇಲಿನ ತೆರೆದ ಗಾಯಗಳು ಮತ್ತು ಹುಣ್ಣುಗಳ ಮೂಲಕವೂ ಈ ರೋಗ ಕಾಣಿಸಿಕೊಳ್ಳಬಹುದು.

ಟೆಟಾನಸ್ ಹೇಗೆ ಹರಡುತ್ತದೆ?

ಟೆಟಾನಸ್ ಬ್ಯಾಕ್ಟೀರಿಯಾ ಸ್ಪೋರ್ ಗಳು ಸಾಮಾನ್ಯವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿರುತ್ತವೆ. ಒಮ್ಮೆ ಕಲುಷಿತ ವಸ್ತುಗಳಿಂದಾದ ಗಾಯದ ಮೂಲಕ ದೇಹಕ್ಕೆ ಬ್ಯಾಕ್ಟೀರಿಯಾ ಪ್ರವೇಶಿಸದ ನಂತರ ಅವರಲ್ಲಿ ಸೋಂಕು ತಗಲುವ ಅಪಾಯ ಇರುತ್ತದೆ. ಸಿಡಿಸಿ ಪ್ರಕಾರವಾಗಿ, ಕ್ಲಾಸ್ಟ್ರಿಡಿಯಂ ಟೆಟನಿ ಈ ಮೂಲಕ ಸೋಂಕನ್ನು ಹರಡುತ್ತದೆ:
ಧೂಳು, ಎಂಜಲು ಅಥವಾ ಮಲದೊಂದಿಗೆ ಕಲುಷಿತವಾದ ಗಾಯ
ಮೊಳೆ ಅಥವಾ ಸೂಜಿಯೊಂದಿಗಿನ ಗಾಯಗಳು
ಸುಟ್ಟ ಗಾಯಗಳು
ಜಜ್ಜಿದ ಗಾಯಗಳು
ಸತ್ತ ಕೋಶಗಳಿಂದ ಉಂಟಾಗುವ ಗಾಯಗಳು
ಸಿಡಿಸಿ ಪ್ರಕಾರವಾಗಿ, ಟೆಟಾನಸ್ ಬ್ಯಾಕ್ಟೀರಿಯಾ ಸೋಂಕು ತಗಲಬಹುದಾದ ಇತರ ಮಾರ್ಗಗಳೆಂದರೆ:
ಸ್ವಚ್ಛ ಮೇಲ್ಪದರದ ಗಾಯಗಳು
ಶಸ್ತ್ರಚಿಕಿತ್ಸಾ ವಿಧಾನಗಳು
ಕೀಟ ಕಡಿತಗಳು
ಹಲ್ಲಿನ ಸೋಂಕುಗಳು
ಸಂಪೂರ್ಣ ಮೂಳೆ ಮುರಿತಗಳು (ಮೂಳೆ ಹೊರಗೆ ಕಾಣುವುದು)
ದೀರ್ಘಾವಧಿಯ ಹುಣ್ಣುಗಳು ಮತ್ತು ಸೋಂಕುಗಳು
ಐವಿ ಮೂಲಕ ಔಷಧಗಳನ್ನು ಹಾಕುವಾಗ
ಚುಚ್ಚುಮದ್ದುಗಳನ್ನು ನೀಡುವಾಗ
ಇನ್ಕ್ಯುಬೇಷನ್ ಸಮಯವು (ಕಾಯಿಲೆಗೆ ಒಡ್ಡಿಕೊಂಡ ಸಮಯದಿಂದ) 3 ರಿಂದ 21 ದಿನಗಳಾಗಿದ್ದರೂ ಸಹ ಹೆಚ್ಚಿನ ಪ್ರಕರಣಗಳಲ್ಲಿ 10 ರಿಂದ 14 ದಿನಗಳದ್ದಾಗಿರುತ್ತದೆ. ಈ ಕೆಳಗಿನ ಪ್ರಕರಣಗಳಲ್ಲಿ ಕಡಿಮೆ ಇನ್ಕ್ಯುಬೇಷನ್ ಅವಧಿಯನ್ನು ಕಾಣಬಹುದು:
ಅತ್ಯಂತ ಕಲುಷಿತ ಗಾಯಗಳು
ಹೆಚ್ಚಿನ ಗಂಭೀರ ಕಾಯಿಲೆ
ಟೆಟಾನಸ್ ರೋಗ ಒಂದು ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.

ಟೆಟಾನಸ್ ಎಂದರೇನು?

ಟೆಟಾನಸ್ ರೋಗಕ್ಕೆ ಕಾರಣವಾಗಿರುವ ಕ್ಲಾಸ್ಟ್ರಿಡಿಯಂ ಟೆಟನಿ ಒಂದು ಬ್ಯಾಕ್ಟೀರಿಯಾ ಆಗಿದ್ದು ಇದು ಸಾಮಾನ್ಯವಾಗಿ ಮಣ್ಣು, ಎಂಜಲು, ಧೂಳು ಮತ್ತು ಗೊಬ್ಬರದಲ್ಲಿ ಕಂಡುಬರುತ್ತದೆ. ಸೋಂಕು ತಗುಲಿದಾಗ, ವ್ಯಕ್ತಿಗೆ ದವಡೆ ಮತ್ತು ಕುತ್ತಿಗೆಯ ಭಾಗದಲ್ಲಿ ವಿಶೇಷವಾಗಿ ನೋವುಳ್ಳ ಸ್ನಾಯುಗಳ ಸೆಳೆತ ಇರುತ್ತದೆ. ಇದನ್ನು ಲಾಕ್ ಜಾ ಎನ್ನುತ್ತಾರೆ ಏಕೆಂದರೆ ರೋಗಿಗೆ ಉಸಿರಾಡಲು, ನುಂಗುವುದಕ್ಕೆ ಮತ್ತು ಬಾಯಿ ಹಾಗೂ ಕುತ್ತಿಗೆಯನ್ನು ಸರಿಸಲು ಕಷ್ಟವಾಗುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನನಗೆ ಒಂದಕ್ಕಿಂತ ಹೆಚ್ಚಿನ ಸಲ ಟೆಟಾನಸ್ ಸೋಂಕು ಬರಬಹುದೇ?

ಹೌದು ಒಬ್ಬ ವ್ಯಕ್ತಿಗೆ ಟೆಟಾನಸ್ ಸೋಂಕು ಒಂದಕ್ಕಿಂತ ಹೆಚ್ಚಿನ ಸಲ ಬರಬಹುದು. ಟೆಟಾನಸ್ ನಿಂದ ಗುಣವಾಗುವುದು ಪ್ರಾಕೃತಿಕ ರೋಗನಿರೋಧಕ ಶಕ್ತಿಯನ್ನು ನೀಡಿದೆ ಎಂದಲ್ಲ. ಒಂದುವೇಳೆ ವ್ಯಕ್ತಿಯು ಟೆಟಾನಸ್ ನಿಂದ ಗುಣಮುಖವಾದರೂ ಸಹ ಅವರು ಲಸಿಕೆಯನ್ನು ಪಡೆಯಬೇಕು.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker